ಮೈಸೂರು: ಹೆಚ್.ಡಿ.ಕೋಟೆ ತಾಲ್ಲೂಕಿನ ನಾಗರಹೊಳೆ ಅರಣ್ಯ ವ್ಯಾಪ್ತಿಯ ದಮ್ಮನಕಟ್ಟೆ ಪ್ರದೇಶದಲ್ಲಿ ಹುಲಿರಾಯನ ಖದರ್ ಸಫಾರಿಗರ ಕ್ಯಾಮರಾದಲ್ಲಿ ಸೆರೆಯಾಗಿದೆ.
ರಸ್ತೆ ಬದಿ ಪ್ಯಾರಾಪೀಟ್ ವಾಲ್ ಮೇಲೆ ಗಾಂಭೀರ್ಯದಿಂದ ಕುಳಿತು ಸಫಾರಿಗರಿಗೆ ಫೋಸ್ ಕೊಟ್ಟಿದೆ. ಹುಲಿರಾಯನ ಚಲನವಲನಗಳನ್ನ ಕಣ್ತುಂಬಿಕೊಂಡ ಪ್ರವಾಸಿಗರು ಖುಷಿಯಾಗಿದ್ದಾರೆ.

