ಮೈಸೂರು : ಹುಲಿ ಉಪಟಳ ಮೈಸೂರಿನಲ್ಲಿ ಹೆಚ್ಚಾಗಿದೆ.  ಹುಲಿ ಮತ್ತೆ ಮೈಸೂರಿನ ಬಿಇಎಂಎಲ್ ಕಾರ್ಖಾನೆ ಬಳಿ ಪ್ರತ್ಯಕ್ಷವಾಗಿದ್ದು, ಹುಲಿ ಉಪಟಳದಿಂದ ಜನರು  ಭಯಭೀತರಾಗಿದ್ದಾರೆ. ಹುಲಿ ಬೆಮೆಲ್ ಕಾರ್ಖಾನೆಯ ಕಾಂಪೌಂಡ್ ಜಿಗಿದಿದೆ.

ಹುಲಿ ಕಾಂಪೌಂಡ್ ಹಾರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೊನ್ನೆ ಮೊನ್ನೆಯಷ್ಟೇ ಕಾರ್ಖಾನೆಯ ಸುತ್ತಮುತ್ತ  ಹುಲಿ ಕಾಣಿಸಿಕೊಂಡಿತ್ತು. ಹುಲಿ ಕಾಣಿಸಿಕೊಳ್ಳುತ್ತಿದ್ದಂತೆ ಹುಲಿ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದರು.  ಹುಲಿ ಸೆರೆಗಾಗಿ ಕಾರ್ಯಾಚರಣೆ ಚುರುಕುಗೊಳಿಸಿದರು. ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಯಿತು.