ಮೈಸೂರು : ಮತ್ತೆ ಹುಲಿ ಕಾಣಿಸಿಕೊಂಡ ಘಟನೆ ಹುಣಸೂರು ತಾಲ್ಲೂಕು ಹೈರಿಗೆ ಗ್ರಾಮದ ಬಳಿ ನಡೆದಿದೆ. ಗ್ರಾಮದ ತಮ್ಮೇಗೌಡರ ಜಮೀನಿನಲ್ಲಿ ಕಾಣಿಸಿಕೊಂಡಿತ್ತು. ನಂತರ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

ಕಾಡಿಗೆ ಭಾರಿ ಗಾತ್ರದ ಹುಲಿ ವಾಪಸ್ಸಾಗಿದೆ. ಇದೀಗ ಮತ್ತೆ ಹೈರಿಗೆ ಗ್ರಾಮದಲ್ಲಿ ಹುಲಿ ಪ್ರತ್ಯಕ್ಷವಾಗಿದೆ. ಹುಲಿ ಕಾರ್ಯಾಚರಣೆಗೆ ಸಾಕಾನೆಗಳ ಬಳಕೆ ಮಾಡಲಾಗಿದೆ. ಹೈರಿಗೆ ಗ್ರಾಮಕ್ಕೆ ಆಗಮಿಸಿದ ಭೀಮ ಹಾಗೂ ಜೂ ಅಭಿ ಆನೆ. ಆರ್ ಎಫ್ ಓ ನಂದಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

ಕಾರ್ಯಾಚರಣೆಯಲ್ಲಿ 25ಕ್ಕೂ ಹೆಚ್ಚು ಸಿಬ್ಬಂದಿ ಭಾಗಿಯಾಗಿದ್ದರು. ಹೈರಿಗೆ ಗ್ರಾಮದ ಕೆರೆ ಭಾಗದ ಜಮೀನು ಮುತ್ತುರಾಯ ಹೊಸಹಳ್ಳಿ ಅರಣ್ಯ ಪ್ರದೇಶದ ಬಳಿ ಕೂಂಬಿಂಗ್. ಕೆರೆ ತೋಟ ಜಮೀನುಗಳಿಗೆ ಹೋಗುವಾಗ ಎಚ್ಚರಿಕೆಯಿಂದಿರಲು ಅರಣ್ಯ ಇಲಾಖೆ ಮನವಿ ಮಾಡಿದೆ. ಜನರಲ್ಲಿ ಆತಂಕ ಮನೆಮಾಡಿದೆ.