ಮೈಸೂರು : ಕಬಿನಿ ಕಾಡಿನಲ್ಲಿ ಹುಲಿ ಮರಿಗಳ ಕಲರವ ಕಂಡುಬಂದಿದ್ದು, ನಾಗರಹೊಳೆ ಅಭಯಾರಣ್ಯದಲ್ಲಿ ಹುಲಿ ಮರಿಗಳ ಅಪರೂಪದ ದೃಶ್ಯ ಸೆರೆಯಾಗಿದೆ. ಕಾಡಿನ ಮಣ್ಣಿನ ಸುವಾಸನೆ ಸವಿದು ಪುಟ್ಟ ಹುಲಿ ಮರಿಗಳು ಮೈಮರೆತಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕಾಡು ತಂಪಾಗಿದೆ. ತಾಯಿಯೊಂದಿಗೆ ರಸ್ತೆಗಿಳಿದು ಮಣ್ಣಿನ ಗಮಲಿಗೆ ಮರಿಗಳು ಮಾರುಹೋಗಿದೆ. ಸಫಾರಿ ವೇಳೆ ಪ್ರವಾಸಿಗರ ಕ್ಯಾಮರಾದಲ್ಲಿ ಮನಮೋಹಕ ದೃಶ್ಯ ಸೆರೆಯಾಗಿದೆ. ಸಫಾರಿ ಮಾರ್ಗದಲ್ಲೇ ಮರಿಗಳೊಂದಿಗೆ ತಾಯಿ ಹುಲಿ ರಾಜಗಾಂಭೀರ್ಯದಿಂದ ಕುಳಿತಿತ್ತು.

ಮರಿಗಳ ತುಂಟಾಟದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಬಿನಿಯ (ನಾಗರಹೊಳೆ) ಸೊಬಗನ್ನು ವನ್ಯಜೀವಿ ಪ್ರಿಯರು ಕಣ್ತುಂಬಿಕೊಂಡರು.

View this post on Instagram

A post shared by News Karnataka (@newskarnataka)