ಮೈಸೂರು : ಮೈಸೂರಿನಲ್ಲಿ ಹುಲಿ ದಾಳಿ ಮುಂದುವರಿದಿದೆ. ಅರಣ್ಯ ಇಲಾಖೆ ವಾಚರ್, ಹಸು, ಮೇಕೆ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ.
ವಾಚರ್ ಪ್ರಾಣಾಪಾಯದಿಂದ ಪಾರಾಗಿದ್ದು, ಹಸು, ಮೇಕೆ ಸಾವನ್ನಪ್ಪಿದೆ. ಹುಲಿ ಸೆರೆ ಕಾರ್ಯಚರಣೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಭಾಗಿಯಾಗಿದ್ದರು.
ಯಡಿಯಾಲ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸರಗೂರು ತಾಲೂಕಿನ ಕಾಟ್ವಾಳು ಗ್ರಾಮದಲ್ಲಿ ಹಸು ಮೇಲೆ ದಾಳಿ ನಡೆಸಿದೆ. ಯಡಿಯಾಲ ವನ್ಯಜೀವಿ ವ್ಯಾಪ್ತಿಯಲ್ಲಿ ಹುಲಿ ಸಂಚಾರ ನಡೆಸುತ್ತಿದೆ.
ಹುಲಿ ಸೆರೆಗೆ ಅರಣ್ಯ ಇಲಾಖೆ ಮುಂದಾಗಿದೆ. ಅರಣ್ಯ ಇಲಾಖೆಗೆ ಹುಲಿ ದಾಳಿ ಕೇಸ್ ತಲೆನೋವಾಗಿದೆ.

