ಮೈಸೂರು : ಹುಲಿ ದಾಳಿ ಮೈಸೂರಿನಲ್ಲಿ ಮತ್ತೆ ಮುಂದುವರಿದಿದೆ. ಹುಲಿ ದಾಳಿಗೆ ಊರ ಬಸವ (ಗೂಳಿ) ಬಲಿಯಾಗಿರುವ ಘಟನೆ ಹೆಚ್ ಡಿ ಕೋಟೆ ತಾಲೂಕಿನ ಕಾರಾಪುರ ಸಮೀಪದ ಎನ್ ಬೆಳ್ತೂರು ಬಳಿ ನಡೆದಿದೆ.
ಎನ್.ಬೆಳ್ತೂರು ಮಗ್ಗೆ ಮರಳ್ಳಿ ದೇವಸ್ಥಾನದ ಪೂಜಿಸುವ ಊರ ಬಸವ ಇದಾಗಿದ್ದು, ಬಸವನನ್ನು ಅರ್ಧಂಬರ್ಧ ಹುಲಿ ತಿಂದು ಹಾಕಿದೆ. ಸ್ಥಳಕ್ಕೆ ಅರಣ್ಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಿರಂತರ ಹುಲಿ ದಾಳಿಯಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಹುಲಿ ಸೆರೆ ಹಿಡಿಯುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

