ಮೈಸೂರು : ಹುಲಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ರೊಚ್ಚಿಗೆದ್ದು RFO ಮೇಲೆ ಹಲ್ಲೆ ನಡೆಸಲಾಗಿದೆ.
ಸರಗೂರು ತಾಲೂಕಿನ ಹೆಗ್ಗೂಡಿಲು ಗ್ರಾಮದಲ್ಲಿ ಹುಲಿ ದಾಳಿಯಿಂದ ರೈತ ದಂಡನಾಯಕ ಮೃತಪಟ್ಟಿದ್ದನು. ಘಟನೆ ಸ್ಥಳಕ್ಕೆ ತೆರಳಿದ RFO ಅಮೃತಾ ಮೇಲೆ ಆಕ್ರೋಶ ಹೊರಹಾಕಿ ಗ್ರಾಮಸ್ಥರು ಹಲ್ಲೆ ಮಾಡಿದ್ದಾರೆ.
ಹುಲಿ ದಾಳಿ ತಡೆಯಲು ಅರಣ್ಯ ಇಲಾಖೆ ವಿಫಲ ಹಿನ್ನಲೆ ರೊಚ್ಚಿಗೆದ್ದ ಗ್ರಾಮಸ್ಥರಿಂದ ಹಲ್ಲೆ ನಡೆಸಲಾಗಿದೆ. ಸ್ಥಳೀಯರಿಂದ RFO ಮೇಲಿನ ಹಲ್ಲೆಯನ್ನು ಅರಣ್ಯ ಅಧಿಕಾರಿಗಳು ತಡೆದರು. ಸ್ಥಳದಲ್ಲಿ ಹುಲಿ ಸೆರೆಗಾಗಿ ಆಕ್ರೋಶ ಮುಂದುವರಿದಿದೆ.

