ಮೈಸೂರು: ನಾಗರಹೊಳೆ ಸಫಾರಿಯಲ್ಲಿ ಪ್ರವಾಸಿಗರಿಗೆ ರೋಮಾಂಚನ ದೃಶ್ಯ ಕಂಡು ಬಂದಿದೆ. ಒಂದೇ ಬಾರಿ ಮೂರು ಹುಲಿಗಳ ದರ್ಶನವಾಗಿದೆ.ಹೆಚ್.ಡಿ.ಕೋಟೆ ತಾಲ್ಲೂಕು ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯ ದಮ್ಮನ ಕಟ್ಟೆ ಸಫಾರಿಯಲ್ಲಿ ನಿನ್ನೆ ಸಂಜೆ ದೃಶ್ಯ ಕಂಡುಬಂದಿದೆ.
ಸಫಾರಿ ವಾಹಗಳು ಸಂಚರಿಸುವ ರಸ್ತೆಗೆ ಅಡ್ಡಲಾಗಿ ಮಲಗಿದ್ದ ಮೂರು ಹುಲಿಗಳು ಪ್ರವಾಸಿಗರಿಗೆ ದರುಶನ ನೀಡಿವೆ. ರಸ್ತೆಯಲ್ಲಿ ನಿಂತಿದ್ದ ಮಳೆ ನೀರಿನಲ್ಲಿ ಮೂರು ಹುಲಿಗಳು ಆಟವಾಡುತ್ತಿದ್ದ ದೃಶ್ಯ ಸಫಾರಿ ವಾಹನದ ಚಾಲಕ ಪ್ರದೀಪ್ ಮೊಬೈಲ್ ನಲ್ಲಿ ಸೆರೆಯಾಗಿದೆ. ವಾಹನದ ಶಬ್ಧಕ್ಕೆ ಹುಲಿಗಳು ಜಾಗ ಖಾಲಿ ಮಾಡಿವೆ.ದೃಶ್ಯ ಕಂಡು ಪ್ರವವಾಸಿಗರು ಪುಳಕಿತರಾಗಿದ್ದಾರೆ.

