ಮೈಸೂರು: ಇಲವಾಲದ ಮೀನಾಕ್ಷಿಪುರ ಗ್ರಾಮದ ಕೆ.ಆರ್.ಎಸ್. ಹಿನ್ನೀರಿನ ನಲ್ಲಿ ಈಜಲು ಹೋದ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.

ಮಂಡ್ಯ ಜಿಲ್ಲೆ ನಾಗಮಂಗಲದ ಏಮ್ಸ್ ಬಿ ಎಸ್ ಸಿ ನರ್ಸಿಂಗ್ ಕಾಲೇಜ್ ನ, 2 ನೇ ವರ್ಷದ ವಿದ್ಯಾರ್ಥಿಗಳಾದ ಪ್ರಶಾಂತ್(21), ಕೃಷ್ಣ (21), ಸಿದ್ದೇಶ್(21) ಮೃತ ಪಟ್ಟಿದ್ದಾರೆ.

ವೀಕೆಂಡ್ ಹಿನ್ನಲೆ ಹಿನ್ನೀರಿನಲ್ಲಿ ಈಜಾಡಲು ಬಂದು ಮೂರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.