ಮೈಸೂರು : ಒಂದೇ ರಾತ್ರಿ ಮೂರು ಅಂಗಡಿಗಳಿಗೆ ಕನ್ನ ಹಾಕಿದ ಕಳ್ಳರು ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿರುವ ಘಟನೆ ನಂಜನಗೂಡು ತಾಲೂಕಿನ ಹೆಡಿಯಾಲ ಗ್ರಾಮದಲ್ಲಿ ನಡೆದಿದೆ.

ಅಪ್ರಾಪ್ತ ಸೇರಿ ಮೂವರನ್ನು ಅರೆಸ್ಟ್ ಮಾಡಲಾಗಿದೆ. ಹೆಡಿಯಾಲ ಗ್ರಾಮದ ಬಸ್ ನಿಲ್ದಾಣದ ಬಳಿ ದಿನಸಿ ಅಂಗಡಿ, ಮದ್ಯದಂಗಡಿಯ ಬೀಗವನ್ನು ಕಳ್ಳರು ಮುರಿದಿದ್ದರು. ಈ ವೇಳೆ ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ  ನೀಡಲಾಯಿತು.

ಗ್ರಾಮಸ್ಥರ ನೆರವಿನಿಂದ ಕಳ್ಳರನ್ನು  ಪೊಲೀಸರು ಸೆರೆ ಹಿಡಿದರು. ಮಾರಕಾಸ್ತ್ರಗಳಿಂದ ಬೆದರಿಸಿ ಎಸ್ಕೇಪ್ ಆಗಲು ಕಳ್ಳರು ಯತ್ನಿಸಿದ್ದಾರೆ. ಈ ವೇಳೆ ಓಡಲು ಯತ್ನಿಸಿದ ಕಳ್ಳರನ್ನು ಪೊಲೀಸರು ಹಿಡಿದಿದ್ದಾರೆ. ಪ್ರತಾಪ್ 21, ಮಹಾಲಿಂಗ 35, ಓರ್ವ ಅಪ್ರಾಪ್ತ ನ ಬಂಧನ ಮಾಡಲಾಗಿದೆ. ಶೋಕಿಗಾಗಿ ಕಳ್ಳತನ ಮಾಡುತ್ತಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.