ಮೈಸೂರು : ಕಾಲುವೆಗೆ ಈಜಲು ಇಳಿದಿದ್ದ ಮೂರು ಬಾಲಕರು ದಾರುಣ ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆ ಸಾಲಿಗ್ರಾಮ ಪಟ್ಟಣದಲ್ಲಿ ನಡೆದಿದೆ.

ಅಯಾನ್ 16, ಆಜಾನ್ 13, ಹಾಗೂ ಲುಖ್ಮಾನ್ 14 ಮೃತ ಬಾಲಕರು. ಚಾಮರಾಜ ಎಡದಂಡೆ ಕಾಲುವೆಗೆ ಬಾಲಕರು ತೆರಳಿದ್ದರು. ಅಯಾನ್ ಹಾಗೂ ಆಜಾನ್ ಕೆ.ಆರ್.ಪೇಟೆಯ ನವೋದಯ ಶಾಲೆಯಲ್ಲಿ ಓದುತ್ತಿದ್ದರು. ದೀಪಾವಳಿ ಹಬ್ಬದ ರಜೆ ಹಿನ್ನೆಲೆ ಗ್ರಾಮಕ್ಕೆ ಬಂದಿದ್ದರು.

ಸಂಜೆಯಾದರೂ ಮಕ್ಕಳು ಮನೆಗೆ ಬಾರದಿದ್ದಾಗ ಹುಡುಕಾಟ ನಡೆಸಿದಾಗ ಪ್ರಕರಣ ಬೆಳಕಿಗೆ. ಸ್ಥಳದಲ್ಲಿ ಮಕ್ಕಳ ಬಟ್ಟೆ ಹಾಗೂ ಚಪ್ಪಲಿಗಳು ಕಂಡು ಹುಡುಕಾಟ ನಡೆಸಿದರು. ಇಬ್ಬರ ಮೃತದೇಹದ ಪತ್ತೆಯಾಗಿದೆ. ಮತ್ತೊಬ್ಬನ ಮೃತದೇಹಕ್ಕಾಗಿ  ಹುಡುಕಾಟ ಮುಂದುವರೆದಿದೆ.  ಸಾಲಿಗ್ರಾಮ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಯಿಂದ ಹುಡುಕಾಟ ನಡೆಸಿದರು.