ಮೈಸೂರು : ಸರ್ವೇ ಅಧಿಕಾರಿಗಳಿಗೆ ಮಚ್ಚು ತೋರಿಸಿ ಪೊಲೀಸರ ಸಮ್ಮುಖದಲ್ಲೇ ಬಾಯಲ್ಲಿ ಬೆಂಕಿ ಉಗುಳಿ ಬೆದರಿಕೆ ಹಾಕಿದ ಘಟನೆ ಹುಣಸೂರು ತಾಲೂಕು ಹನಗೋಡು ಹೋಬಳಿ ಶಿಂಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸರ್ವೇ ಅಧಿಕಾರಿಗಳಿಗೆ ಮಚ್ಚು ತೋರಿಸಿ ಬೆದರಿಸಿರುವ ಲವ ಎಂಬಾತ. ಪೊಲೀಸರಿದ್ದರೂ ಕ್ಯಾರೆ ಎನ್ನದೆ ಲವ ಅವಾಜ್ ಹಾಕಿದ್ದಾರೆ. ಬೆದರಿಕೆ ಹಾಕಿರುವ ವಿಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದೆ. ಶಿಂಡೇನಹಳ್ಳಿ ಗ್ರಾಮದ ಸರ್ವೆ ನಂ.66/12 ರ 4 ಎಕ್ರೆ 3 ಗುಂಟೆ ಜಮೀನು ವಿವಾದ ನಡೆದಿದೆ.

ಉಪವಿಭಾಗ ಅಧಿಕಾರಿಗಳ ವಿವಾದ ನ್ಯಾಯಾಲಯ ಮೆಟ್ಟಿಲೇರಿದೆ. ಮಂಗಳವಾರ ಮಂಗಳಮ್ಮ, ಲವ, ಕುಶ ಎಂಬುವರ ನಡುವೆ ವಿವಾದ ನಡೆದಿದೆ. ಕೆಲವು ದಿನಗಳ ಹಿಂದೆ ಮಂಗಳವಾರ ರವರಂತೆ ತೀರ್ಪು ನೀಡಲಾಗಿದೆ. ಈ ಹಿನ್ನಲೆ ಜಮೀನು ಸರ್ವೆ ನಡೆಸಿ ಹದ್ದುಬಸ್ತು ಮಾಡಿಕೊಡುವಂತೆ ಸರ್ವೆ ಅಧಿಕಾರಿಗಳಿಗೆ ಎಸಿ ನ್ಯಾಯಾಲಯದಲ್ಲಿ ಆದೇಶವೂ ಆಗಿದೆ.

ಈಗಾಗಲೇ ಸರ್ವೆ ಮಾಡಲು ಬಂದ ಅಧಿಕಾರಿಗಳ ಮೇಲೆ ಆವಾಜ್ ಹಾಕಿ ಹಿಂದೆ ಕಳಿಸಿದ ಪ್ರಕರಣಗಳೂ ನಡೆದಿವೆ. ನಿನ್ನೆ ಸೂಕ್ತ ಪೊಲೀಸ್ ಬಂದೋ ಬಸ್ತ್ ನಡುವೆ ADLR ಮಹಮದ್ ಹುಸೇನ್, ಸರ್ವೆ ಅಧಿಕಾರಿಗಳಾದ ಕುಮಾರ್, ಮಂಜು ಬಂದಾಗ ಲವ ಎಂಬಾತ ಮೊಚ್ಚು ಸಮೇತ ಬಂದು ಬೆದರಿಕೆ ಹಾಕಿದ್ದಾನೆ.

ಪೊಲೀಸ್ ಸಿಬ್ಬಂದಿಗಳಿದ್ದರೂ ಆವಾಜ್ ಹಾಕಿದ್ದಾನೆ. ನಂತರ ಸೀಮೆಣ್ಣೆ ಕುಡಿದು ಬೆಂಕಿ ಉಗುಳಿ ಬೆದರಿಕೆ ಹಾಕಿದ್ದಾನೆ. ಪೊಲೀಸರು ಮಧ್ಯ ಪ್ರವೇಶಿಸಿ ಲವ ಕೈಲಿದ್ದ ಮಚ್ಚು ವಶಪಡಿಸಿಕೊಂಡಿದ್ದಾರೆ.

ಲವಗೆ ಕೆಂಡ, ಹರೀಶ, ಸೋಮೇಗೌಡ ಸಹಕರಿಸಿದ್ದಾರೆ. ಸರ್ವೆ ಮಾಡಲು ಬಂದ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಹಿನ್ನಲೆ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಲು ಅಧಿಕಾರಿಗಳು ಮುಂದಾಗಿದ್ದಾರೆ.