ಮೈಸೂರು: ಈ ವರ್ಷದ ದಸರಾ ಕಳವಳಕಾರಿ ಎಂದು ಮೈಸೂರಿನಲ್ಲಿ ರಾಜಮಾತ ಪ್ರಮೋದಾ ದೇವಿ ಒಡೆಯರ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರ ನಡೆಸಲು ಉದ್ದೇಶಿರುವ ದಸರಾ ಆಚರಣೆ. ಚಾಮುಂಡಿ ಬೆಟ್ಟದ ಸುತ್ತ ನಡೆಯುತ್ತಿರುವ ರಾಜಕೀಯ ಎಲ್ಲವೂ ತೀವ್ರ ಬೇಸರ ತರಿಸಿದೆ. ದಸರಾ ಉದ್ಘಾಟನೆಗೆ ಆಹ್ವಾನಿಸಿದ ಗಣ್ಯರ ಆಯ್ಕೆ ಸಂಘರ್ಷದ ಅಭಿಪ್ರಾಯಕ್ಕೆ ಕಾರಣವಾಗಿದೆ.
ಚಾಮುಂಡಿ ಬೆಟ್ಟ ಹಿಂದೂಗಳಿಗೆ ಸೇರಿಲ್ಲ ಎನ್ನುವ ಹೇಳಿಕೆಗಳು ಸರಿಯಿಲ್ಲ. ಚಾಮುಂಡಿ ಬೆಟ್ಟ ಎಂದಿಗೂ ಮುಜರಾಯಿ ಇಲಾಖೆಯ ಅಡಿಯಲ್ಲಿ ತರುತ್ತಿರಲಿಲ್ಲ. ದಸರಾ ಒಂದು ಸಾಂಸ್ಕೃತಿಕ ಆಚರಣೆ
ವಿಜಯದಶಮಿ ನವರಾತ್ರಿ ಎಲ್ಲವೂ ನಮ್ಮ ಆಚರಣೆಗಳು. ಈ ಗಣೇಶ ಹಬ್ಬದಂದು ತಪ್ಪು ಕಲ್ಪನೆಗಳು ಸಂಘರ್ಷ ನಿವಾರಣೆ ಆಗಲಿ ಎಂದು ಭಾವಿಸುತ್ತೇನೆ ಎಂದು ಮೈಸೂರಿನಲ್ಲಿ ರಾಜಮಾತ ಪ್ರಮೋದಾ ದೇವಿ ಒಡೆಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

