ಮೈಸೂರು: ರಾಜ್ಯ ಬಜೆಟ್ ವಿಚಾರ ಸಂಸದ ಯದುವೀರ್ ಪ್ರತಿಕ್ರಿಯಿಸಿದ್ದು, ಈ ಬಜೆಟ್ ಅಲ್ಪಸಂಖ್ಯಾತರ ಓಲೈಕೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ. ಬೆಂಗಳೂರು ಅಜ್ ಅಭಿವೃದ್ಧಿ. ಅಲ್ಪಸಂಖ್ಯಾತರ ವಿದೇಶ ವ್ಯಾಸಂಗಕ್ಕೆ 20 ರಿಂದ 30ಲಕ್ಷ ಧನ ಸಹಾಯದ ಹೆಚ್ಚಳ, ಕಾಮಗಾರಿ ಗುತ್ತಿಗೆಯಲ್ಲೂ ಮುಸಲ್ಮಾನರಿಗೆ ಮೀಸಲಾತಿ, ರಾಜ್ಯದಲ್ಲಿರುವ ಹಲವು ವಿ.ವಿ ಗಳ ಮುಚ್ಚಿ ಈಗ ಮುಸ್ಲಿಂರಿಗೆ ಪ್ರತ್ಯಕ್ಷ ವಿ.ವಿ ಸ್ಥಾಪನೆ ಮಾಡಲು ಮುಂದಾಗಿದೆ ಎಂದರು.
ಜಾತಿ, ಧರ್ಮದ ಆಧಾರದ ಮೇಲೆ ಓಲೈಕೆ ಮಾಡುವುದು ತಪ್ಪು. ಎಲ್ಲರೂ ಭಾರತೀಯರೆ ಯಾಕೇ ಈ ರೀತಿ ಅಂತ ನಾವು ಪ್ರಶ್ನೆ ಮಾಡಬೇಕಿದೆ. ತವರು ಮೈಸೂರಿಗೆ ಅನೇಕ ಯೋಜನೆಗಳ ಕೊಡುವ ಅನೇಕ ನಿರೀಕ್ಷೆ ಇತ್ತು. ಆದರೆ ಬಜೆಟ್ ನಲ್ಲಿ ಹೇಳಿಕೊಳ್ಳುವ ಯೋಜನೆ ಕೊಟ್ಟಿಲ್ಲ ಎಲ್ಲಾ ಶೂನ್ಯ. ವಿಮಾನದ ನಿಲ್ದಾಣ ಅಭಿವೃದ್ಧಿಗೆ ಹಿಂದೆ ಇದ್ದ ಬಿಜೆಪಿ ಸರ್ಕಾರದ ಪ್ಯಾಕೇಜನ್ನ ಮರು ಘೋಷಣೆ ಮಾಡಿದ್ದಾರೆ.
ಸಬರ್ ಬಸ್ ಸ್ಟಾಂಡ್ ಬದಲಾವಣೆ ಜನರ ವಿರೋಧ ಇದೆ. ವೈಜ್ಞಾನಿಕವಾಗಿ ಚಿಂತಿಸಿ ಬಸ್ ನಿಲ್ದಾಣ ಮಾಡಬೇಕಿದೆ. ಪಾರಂಪರಿಕ ಕಟ್ಟಡಗಳ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ. ಮೈಸೂರಲ್ಲಿ ಫಿಲಂ ಸಿಟಿ ವಿಚಾರದಲ್ಲೂ ಈವರೆಗೆ ಕೆಲಸ ಆಗಿಲ್ಲ. ಮುಂದೆ ಎನ್ ಮಾಡ್ತಾರೆ ಅಂತ ಕಾದು ನೋಡೋಣ. ಬೃಹತ್ ಮೈಸೂರು ವಿಚಾರ ಕೂಡ ಪ್ರಸ್ತಾಪ ಇಲ್ಲ. ಮೇಲ್ನೋಟಕ್ಕೆ ನಿರಾಶಾದಾಯಕ ಬಜೆಟ್ ಎನಿಸುತ್ತದೆ ಎಂದು ಮೈಸೂರಿನಲ್ಲಿ ಸಂಸದ ಯದುವೀರ್ ಹೇಳಿಕೆ ನೀಡಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ನಟ್ಟು ಬೊಲ್ಟು ಟೈಟ್ ಹೇಳಿಕೆ ವಿಚಾರವಾಗಿ ಸಂಸದ ಯದುವೀರ್ ಪ್ರತಿಕ್ರಿಯಿಸಿದ್ದು, ಆಹ್ವಾನ ಮಾಡೋದು ನಿಮ್ಮ ಜವಾಬ್ದಾರಿ. ಬರೋದು ಬಿಡೋದು ಅವರಿಗೆ ಬಿಟ್ಟಿದ್ದು. ಒಂದು ಜವಾಬ್ದಾರಿ ಸ್ಥಾನದಲ್ಲಿದ್ದುಕೊಂಡು ಈ ರೀತಿ ಹೇಳಿಕೆ ಕೊಡುವುದು ತಪ್ಪು. ನಾವು ಸಮಾಜದ ಸೇವೆಗೆ ಇರುವುದೇ ಹೊರತು ಒತ್ತಡ ನೀಡಲು ಅಲ್ಲ. ಡಿಕೆಶಿ ಹೇಳಿಗೆ ಸಂಸದ ಯದುವೀರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

