ಮೈಸೂರು : ಮನೆ ಕಳ್ಳತನ ನಡೆದಿದ್ದು, ಗ್ರಾಮಸ್ಥರು ಬೆಚ್ಚಿ ಬಿದ್ದ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕು ಮೂಕನಹಳ್ಳಿಯಲ್ಲಿ ಗ್ರಾಮದಲ್ಲಿ ನಡೆದಿದೆ.

ಲಾಕರ್‌ನಲ್ಲಿಟ್ಟಿದ್ದ 200ಗ್ರಾಂ ಚಿನ್ನಾಭರಣ, 1 ಲಕ್ಷ ನಗದು ಕಳ್ಳತನವಾಗಿದೆ. ಗ್ರಾಮದ ಸ್ವಾಮಿಗೌಡ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಮನೆಯಲ್ಲಿ ಯಾರು ಇಲ್ಲದ ವೇಳೆ ಖದೀಮರು ಮನೆ ನುಗ್ಗಿದ್ದಾರೆ.

ಒಂದು ಚೈನ್, 4 ಉಂಗುರ, 2 ಜೊತೆ ಓಲೆ, ಕಡಗ, ಬ್ರಾಸ್ ಲೈಟ್. ಒಂದು ಲಕ್ಷರೂ ನಗದು ಕಳ್ಳತನವಾಗಿದೆ. ಪ್ರಕರಣ ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.