ಮೈಸೂರು : ಸಿದ್ದರಾಮಯ್ಯರನ್ನು ಅಧಿಕಾರದಿಂದ ಇಳಿಸಲು ಕುಡುಗೋಲು ಬಡಿಗೆ ಹಿಡಿದು ಬರುತ್ತಾರೆ. ಮೈಸೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.
ಸಿದ್ದರಾಮಯ್ಯನವ್ರು ರಾಜಕೀಯ ಚಾಣಕ್ಷರು. ತಮ್ಮ ಅವಧಿ ಮುಗಿಯುತ್ತಿದೆ ಅಂತ ಸಿದ್ದರಾಮಯ್ಯ ರಾಜಕೀಯ ತಂತ್ರ ಕುತಂತ್ರ ಮಾಡುತ್ತಿದ್ದಾರೆ. ಡಿಕೆಶಿ ವಿರುದ್ಧ ರಾಜಕೀಯ ದಾಳ ಉರುಳಿಸುತ್ತಿದ್ದಾರೆ.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ನನ್ನದು ಸಿಂಹಪಾಲು ಅಂತ ಡಿಕೆ ಇದ್ದಾರೆ. ಸಿಎಂ ಆಗಬೇಕು ಅಂತ ಕನಸು ಕಾಣುತ್ತಿದ್ದಾರೆ.
ಇನ್ನೊಂದು ಕಡೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಿದರೂ, ಡಿಕೆ ಸಿಎಂ ಆಗಬಾರದು ಅಂತಿದ್ದಾರೆ. ನಾವು ಸಿಎಂ ಆಗಬೇಕು ಅಂತ 8-10 ಜನ ಸಚಿವರು ಡಿನ್ನರ್ ಮೀಟಿಂಗ್ ಮಾಡುತ್ತಿದ್ದಾರೆ.
ಆಡಳಿತ ಪಕ್ಷದ ಸಚಿವರು ಡಿಕೆ ಶಿವಕುಮಾರ್ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಪೂರ್ಣಾವಧಿ ಸಿಎಂ ಆಗಲ್ಲ. ಯಾವುದೇ ಕ್ಷಣದಲ್ಲಾದರೂ ರಾಜೀನಾಮೆ ಕೊಡಬಹುದು ಎಂದು ಮೈಸೂರಿನಲ್ಲಿ ವಿಜಯೇಂದ್ರ ಹೇಳಿಕೆ ನೀಡಿದರು.
ನಾನೇ ಪಕ್ಷ ಕಟ್ಟುತ್ತೇನೆ, ಪಕ್ಷವನ್ನ ನಾನೇ ಅಧಿಕಾರಕ್ಕೆ ತರುತ್ತೇನೆ. ಇದರ ಅರ್ಥ ನಾನೇ ರಾಜ್ಯಾಧ್ಯಕ್ಷರಾಗಿ ಮುಂದುವರೆಯುತ್ತೇನೆ ಅಂಥ ತಾನೇ. ಮೈಸೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಖಡಕ್ ರಿಯಾಕ್ಷನ್ ಕೊಟ್ಟಿದ್ದಾರೆ.
ಎಲ್ಲಾ ಗೊಂದಲಗಳು ಬೇಗ ಬಗೆಹರಿಯುತ್ತದೆ. ಭಿನ್ನಮತೀಯರ ಮಾತುಗಳು ನಿಲ್ಲುತ್ತದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಕಟ್ಟುತ್ತೇನೆ. ಒಂದು ವರ್ಷ ಯಶಸ್ವಿಯಾಗಿ ಅಧ್ಯಕ್ಷ ಸ್ಥಾನ ಯಶಸ್ವಿ ನಿಭಾಯಿಸಿದ್ದೇನೆ. ಮುಂದೇಯೂ ಹೆಚ್ಚು ಶ್ರಮವಹಿಸಿ ಕೆಲಸ ಮಾಡುತ್ತೇನೆ. ಇದರಲ್ಲಿ ಯಾವ ಅನುಮಾನಗಳು ಬೇಡ. ಮೈಸೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿಕೆ ನೀಡಿದರು.

