ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗಾಳಿ ಕುಡಿದರೆ ಜೀವಕ್ಕೆ ಗ್ಯಾರಂಟಿ ಇಲ್ಲ. ರಿಪೋರ್ಟ್‌ ನೋಡಿ ಮೈಸೂರಿಗರು ಭಯಭೀತರಾಗಿದ್ದಾರೆ. ಕಲುಷಿತ ಗಾಳಿಯಲ್ಲಿ ಬೆಂಗಳೂರನ್ನೂ ಮೈಸೂರು ಮೀರಿಸುತ್ತಿದೆ. ಮೈಸೂರು ನಿವೃತ್ತರ ಸ್ವರ್ಗವಲ್ಲ, ಇದೀಗ ರೋಗಗಳ ತಾಣವಾಗಿದೆ.

ಮೈಸೂರು ಗಾಳಿಯಿಂದ ಮಾರಕ ಖಾಯಿಲೆಗಳು ಉದಯವಾಗುತ್ತಿವೆ. ಮೈಸೂರು ವಾತಾವರಣದಲ್ಲಿ ಕ್ಯಾನ್ಸರ್‌ ನಿಂದ ಆಸ್ಪತ್ರೆಗೆ 40% ಜನ ಸೇರಿದ್ದಾರೆ. ಒಂದು ಕಡೆ ಸನ್ ಸ್ಟ್ರೋಕ್ ಆತಂಕ ಮತ್ತೊಂದು ಕಡೆ ವಿಷಗಾಳಿಯ ಭಯ ಉಂಟಾಗಿದೆ.

ಮೈಸೂರು ಗಾಳಿಯ ಗುಣಮಟ್ಟ (AQI )122, ವಾಯು ಗುಣಮಟ್ಟ ಸೂಚ್ಯಂಕ 122, 100 ಕ್ಕಿಂತ ಕಡಿಮೆ ಇದ್ದರೆ ಗಾಳಿ ಸುರಕ್ಷಿತ, 100 ಕ್ಕಿಂತ ಹೆಚ್ಚಿದ್ದರೆ ಅನಾರೋಗ್ಯಕರ. ಮೈಸೂರಿನಲ್ಲಿ ವಾತಾವರಣ ಕಲುಷಿತಗೊಂಡಿದೆ. ಒಂದು ಕೋಟಿಗೂ ಅಧಿಕ ಜನಸಂಖ್ಯೆ ಇರುವ ಬೆಂಗಳೂರನ್ನು ಮೈಸೂರು ಮೀರುಸುತ್ತಿದೆ. ಕೇವಲ 20 ಲಕ್ಷ ಜನರಿರುವ ನಗರದಲ್ಲಿ ವಿಷಗಾಳಿ ಆತಂಕ ಸೃಷ್ಟಿಯಾಗಿದೆ.

ಮೈಸೂರಿನಲ್ಲಿ ಸೂಕ್ಷ್ಮ ಜನರಿಗೆ ಹಾನಿಕಾರಕವಾಗುದ್ದು, ವಾತಾವರಣ ಹದಗೆಡಿಸಿ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಯಾಗಿದ್ದಾರೆ. ಅಸ್ತಮಾ ಇರುವ ವ್ಯಕ್ತಿಗಳು, ಮಕ್ಕಳು, ವೃದ್ಧರು ಎಚ್ಚರ ವಹಿಸಬೇಕು. ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಅತಿಯಾದ ವಾಹನಗಳ ಸಂಚಾರ, ರಸ್ತೆ ಧೂಳು, ಘನ ಇಂಧನ ದಹನ, ತ್ಯಾಜ್ಯ ದಹನ, ಡೀಸೆಲ್ ಜನರೇಟರ್‌ಗಳು, ಸ್ಥಳೀಯ ಕೈಗಾರಿಕೆಗಳಿಂದ ಮಾಲಿನ್ಯ ಉಂಟಾಗಿದೆ.