ಮೈಸೂರು: ಬಿಜೆಪಿಯಲ್ಲಿ ಯಾವುದೇ ಬಣ ಇಲ್ಲ ಎಂದು ಮೈಸೂರು ನೂತನ ಬಿಜೆಪಿ ಜಿಲ್ಲಾಧ್ಯಕ್ಷ ಕುಂಬ್ರಹಳ್ಳಿ ಸುಬ್ಬಣ್ಣ ಹೇಳಿಕೆ ನೀಡಿದರು.

ಚಾಮರಾಜನಗರ ಮೈಸೂರು ಅವಳಿ ಜಿಲ್ಲೆಗಳು. ಅಲ್ಲಿ ವೀರಶೈವ ಸಮಾಜಕ್ಕೆ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಮೈಸೂರಿನಲ್ಲಿ ನಾಯಕ ಸಮುದಾಯದ ನನಗೆ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಸಾಮಾಜಿಕ ನ್ಯಾಯದ ಅಡಿಯಲ್ಲಿ ನನ್ನನ್ನು ಜಿಲ್ಲಾಧ್ಯಕ್ಷನಾಗಿ ಆಯ್ಕೆ ಮಾಡಿದ್ದಾರೆ. ಮೈಸೂರು ಸಿ.ಎಂ ತವರು ಜಿಲ್ಲೆ ಇಬ್ಬರು ಸಚಿವರಿದ್ದಾರೆ ಎಂದರು.

ಜಿಲ್ಲಾಧ್ಯಕ್ಷರಾದ ಮೇಲೆ ಸಾಕಷ್ಟು ಜವಾಬ್ದಾರಿ ಇದೆ. ಸ್ಥಳೀಯ ಚುನಾವಣೆಗಳು ಹತ್ತಿರದಲ್ಲೆ ಇದೆ. ಎಲ್ಲಾ ತಾಲ್ಲೂಕುಗಳಿಗೆ ಪ್ರವಾಸ ಮಾಡಿ ಮನೆ ಮನೆಗೆ ತೆರಳಿ ಪಕ್ಷ ಸಂಘಟನೆ ಮಾಡ್ತೇನೆ. ಮೈಸೂರಿನಲ್ಲಿ ಬಿಜೆಪಿ ಪಕ್ಷವನ್ನು ಪ್ರಬಲವಾಗಿ ಸಂಘಟಿಸುತ್ತೇನೆ. ಬಿಜೆಪಿಯಲ್ಲಿ ಯಾವುದೇ ಬಣ ಇಲ್ಲ ಎಂದರು.

ಇರುವುದೊಂದೆ ಬಣ ಬಿಜೆಪಿ ಬಣ. ಬಣ ಮಾಡುತ್ತಿದ್ದವರನ್ನು ಪಕ್ಷ ಈಗಾಗಲೆ ತೆಗದು ಹಾಕಿದೆ. ನಂಜನಗೂಡಿನಲ್ಲಿ ಮೈಸೂರು ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಕುಂಬ್ರಹಳ್ಳಿ ಸುಬ್ಬಣ್ಣ ಹೇಳಿಕೆ ನೀಡಿದರು.