ಮೈಸೂರು : ಜಮೀನಿನಲ್ಲಿದ್ದ ಪಂಪ್ ಸೆಟ್ ಉಪಕರಣವನ್ನು ಕಳ್ಳರು ಕದ್ದಿರುವ ಘಟನೆ ಹೆಚ್ ಡಿ ಕೋಟೆ ತಾಲೂಕು ಮೊತ್ತ ಗ್ರಾಮದಲ್ಲಿ ನಡೆದಿದೆ.

ಸ್ಟಾರ್ಟರ್, ವಿದ್ಯುತ್ ಫೀಸ್ ಜೆಟ್ ಕಳ್ಳತನ‌ವಾಗಿದ್ದು, ರೈತ ಲೋಕೇಶ್ ಎಂಬುವವರ ಜಮೀನಿನಲ್ಲಿ ಘಟನೆ ನಡೆದಿದೆ. ಗಂಗಾ ಕಲ್ಯಾಣ ಯೋಜನೆಯಲ್ಲಿ ಬೋರ್ ಕೊರೆಸಿ  ಉಪಕರಣಗಳನ್ನು ಅಳವಡಿಸಿದ್ದರು.

ರೈತ ಕುಟುಂಬ ಸಂಕಷ್ಟಕ್ಕೆ‌ ಸಿಲುಕಿದೆ. ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಲಾಗಿದೆ. ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.