ತಿ. ನರಸೀಪುರ: ಶ್ರೀ ಗುಂಜನರಸಿಂಹ ಸ್ವಾಮಿ ದೇವಾಲಯದ ಶ್ರೀ ಮಹಾಲಕ್ಷ್ಮಿದೇವಿ ಅಮ್ಮನವರ ಗುಡಿಯಲ್ಲಿ ಕಳ್ಳತನ ನಡೆದಿದ್ದು, ಪಟ್ಟಣದ ಶ್ರೀ ಗುಂಜನರಸಿಂಹ ಸ್ವಾಮಿ ದೇವಾಲಯದ ಮೇಲಿಂದ ಇಳಿದು ಶ್ರೀ ಮಹಾಲಕ್ಷ್ಮಿ ದೇವಾಲಯದ ಗೇಟ್ ಬೀಗ ಮುರಿದು ದೇವಾಲಯದ ಒಳಗೆ ನುಗ್ಗಿರುವ ಕಳ್ಳರು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಶ್ರೀ ಮಹಾಲಕ್ಷ್ಮಿ ಗುಡಿಯಲ್ಲಿನ ಹುಂಡಿಯಲ್ಲಿರುವ ಚಿಲ್ಲರೆ ಕಾಸು ಬಿಟ್ಟು ಹುಂಡಿಯಲ್ಲಿರುವ ಹಣ ಕದ್ದು ಕಳ್ಳರು ಹೋಗಿದ್ದಾರೆ. ಟಿ ನರಸೀಪುರ ಪಟ್ಟದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇವಾಲಯಕ್ಕೆ ಡಿ ವೈ ಎಸ್ ಪಿ, ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ ಪೋಲಿಸ್ ಸಿಬ್ಬಂದಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ.

