ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ದಿನಗಣನೆ ಆರಂಭವಾಗಿದ್ದು, 750 ಕೆ ಜಿ ತೂಕದ ಚಿನ್ನದ ಅಂಬಾರಿ ಹೊತ್ತು ಸಾಗುವ ಅಭಿಮನ್ಯುವಿಗೆ ಮರದ ಅಂಬಾರಿ ಹೊರಿಸಿ ತಾಲೀಮು ನಡೆಸಲಾಯಿತು.

ಮರದ ಅಂಬಾರಿ ಸೇರಿದಂತೆ ಮರಳು ಮೂಟೆ ಸೇರಿ 750 ಕೆಜಿ ತೂಕ ಹೊತ್ತು ತಾಲೀಮು ನಡೆಸಲಾಯಿತು. ಜಂಬೂಸವಾರಿ ಮೆರವಣಿಗೆಯ ದಿನ ಚಿನ್ನದ ಅಂಬಾರಿ ಕಟ್ಟುವ ಸ್ಥಳದಲ್ಲೇ ಮರದ ಅಂಬಾರಿಯನ್ನು ಅರಣ್ಯ ಇಲಾಖೆ ಕಟ್ಟಿದೆ.

ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಅಭಿಮನ್ಯುವಿಗೆ ಮರದ ಅಂಬಾರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಟ್ಟಿದರು. ಜಂಬೂಸವಾರಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ಮರದ ಅಂಬಾರಿ ಹೊತ್ತು ಗಜಗಂಭೀರ್ಯದಿಂದ  ಅಭಿಮನ್ಯು ಹೆಜ್ಜೆ ಇಟ್ಟಿದೆ. ಅಭಿಮನ್ಯುವಿಗೆ ಕಾವೇರಿ ಮತ್ತು ಹೇಮಾವತಿ ಕುಮ್ಕಿ ಆನೆಗಳಾಗಿ ಸಾಥ್ ನೀಡಿತು. ಇನ್ನುಳಿದ ಹನ್ನೊಂದು ಆನೆಗಳು ಕೂಡ ತಾಲೀಮಿನಲ್ಲಿ ಭಾಗಿಯಾದವು.