ಮೈಸೂರು: ಬೇಸಿಗೆ ಆರಂಭದಲ್ಲೇ ಉರಿ ಬಿಸಿಲು ಹೆಚ್ಚಾಗಿದ್ದು, ಮೃಗಾಲಯದಲ್ಲಿರುವ ಪ್ರಾಣಿ ಪಕ್ಷಿಗಳಿಗೂ ಬೇಸಿಗೆ ಬಿಸಿ ತಟ್ಟಿದೆ. ತಂಪನ್ನೆರೆಯಲು ಮೃಗಾಲಯ ಸಿಬ್ಬಂದಿ ಮುಂದಾಗಿದ್ದಾರೆ.

ಜೆಟ್ ಸ್ಪ್ರಿಂಕ್ಲರ್ ಮೂಲಕ ಕೃತಕ ಮಳೆ ಸುರಿಸಿ ವಾತಾವರಣ ಕೂಲ್ ಮಾಡುವ ಯತ್ನ ನಡೆಯುತ್ತಿದೆ. ಹುಲಿ, ಸಿಂಹ, ಕರಡಿ, ಆನೆ, ಗೊರಿಲ್ಲಗಳಿಗ ಮೈ ಮೇಲೆ ನೀರು ಬೀಳುವಂತೆ ವ್ಯವಸ್ಥೆ ಮಾಡಲಾಗಿದೆ. ಬಿಸಿಲಿನಿಂದ ಮೃಗಾಲಯದ ಗಾರ್ಡನ್ ಒಣಗದಂತೆ ನಿಗಾ ವಹಿಸಲಾಗಿದೆ.

ಮೃಗಾಲಯದ ಆವರಣ ತುಂಬ ಸುಮಾರು 45 ಕಡೆ ಸ್ಪ್ರಿಂಕ್ಲರ್ ಅಳವಡಿಸಲಾಗಿದೆ. ಸುಮಾರು 50 ರಿಂದ 100 ಮೀಟರ್ ಗಳಷ್ಟು ದೂರಕ್ಕೆ ಸ್ಪ್ರಿಂಕ್ಲರ್ ಗಳು ಚಿಮ್ಮುತ್ತಿದೆ. ಮಳೆ ನೀರಿನಂತೆ ಮೈಗೊಡವಿ ನಿಂತು ಮೈ ತಂಪಾಗಿಸಿಕೊಳ್ಳುವ ಪ್ರಾಣಿಗಳು. ಬೇಸಿಗೆ ವೇಳೆ ದೇಹ ತಂಪಾಗಿಸಲು ಗೊರಿಲ್ಲ, ಚಿಂಪಾಜಿ, ಕೋತಿಗಳು ಸೇರಿದಂತೆ ವಿವಿಧ ಪ್ರಾಣಿಗಳಿಗೆ ಕಲ್ಲಂಗಡಿ, ಐಸ್ ಬ್ಲಾಗ್ ಹಣ್ಣು ಹಂಪಲುಗಳ ವಿತರಣೆ ಮಾಡಲಾಗುತ್ತಿದೆ.

ಪ್ರಾಣಿಗಳಿಗೆ ಅಲ್ಲಲ್ಲಿ ನೆರಳಿನ ವ್ಯವಸ್ಥೆ, ಮರಗಿಡಗಳ ಕೆಳಗೆ ನೆರಳಿನ‌ ಆಶ್ರಯವನ್ನು ಪ್ರಾಣಿಗಳು ಪಡೆಯುತ್ತಿದೆ. ಬಿಸಿಲಿನಿಂದ ರಕ್ಷಿಸಲು ಮೃಗಾಲಯ ಸಿಬ್ಬಂದಿ ಕಾರ್ಯ ಪ್ರವೃತ್ತರಾಗಿದ್ದಾರೆ. ರಾಜ್ಯದಲ್ಲೂ ಹಕ್ಕಿ ಜ್ವರದ ಭೀತಿ ಹಿನ್ನಲೆ. ಮೈಸೂರಿನ‌ ಮೃಗಾಲಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಮೃಗಾಲಯದಲ್ಲಿರುವ ಪಕ್ಷಿ ಸಂಕುಲಕ್ಕೆ ಯಾವುದೇ ತೊಂದರೆ ಆಗದಂತೆ ತೀವ್ರ ನಿಗಾ ವಹಿಸಲಾಗಿದೆ. ಪ್ರಾಣಿ ಪಾಲಕರು ಒಂದು ಪಕ್ಷಿ ಮನೆಯಿಂದ ಇನ್ನೊಂದು ಮನೆಗೆ ಹೋಗುವಂತಿಲ್ಲ. ಪ್ರವೇಶ ದ್ವಾರದಲ್ಲೇ ಫುಟ್ ಟಿಬ್ಸ್ ಅಳವಡಿಸಿದ್ದೇವೆ ಅದರಲ್ಲಿ ಕಾಲನ್ನ ಅದ್ದಿ ಜನ ಬರಬೇಕು. ಕೆಲಸ ಮಾಡುವವರು ಕಡ್ಡಾಯವಾಗಿ ಮಾಸ್ಕ್ ಹ್ಯಾಂಡ್ ಗ್ಲೌಸ್ ಹಾಕೊಳ್ಳಲು ಸೂಚಿಸಿದ್ದೆವೆ.

ಪಕ್ಷಿಗಳ ಇಕ್ಕೆಗಳ ಸಂಗ್ರಹಿಸಿ ಪ್ರಯೋಗ ಶಾಲೆಗೆ ಕಳಿಸಿಕೊಡಲಾಗಿದೆ. ನಮ್ಮಲ್ಲಿ ಅಂತಹ ಪ್ರಕರಣಗಳು ಇಲ್ಲಿವರೆಗೂ ಕಂಡು ಬಂದಿಲ್ಲ. ಮಾಂಸಾಹಾರಿ ಪ್ರಾಣಿಗಳಿಗೆ ತರುವ ಚಿಕನ್ ಮಾಂಸವನ್ನ ಪೊಟಾಷಿಯಂ ಪರಮೋನೈಟ್ ನಿಂದ ತೊಳೆದು ಕೊಡಲಾಗುತ್ತದೆ. ರೋಗಗ್ರಸ್ತ ಕೋಳಿ ಮಾಂಸ ಕೊಡುವುದಿಲ್ಲ. ನಮ್ಮಲ್ಲಿರುವ ಪಕ್ಷಿಗಳಿಗೆ ಯಾವುದೇ ರೋಗ ರುಜಿನಗಳು ಕಂಡು ಬಂದಿಲ್ಲ. ಮೈಸೂರಿನ ಮೃಗಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ರಂಗಸ್ವಾಮಿ ಮಾಹಿತಿ ನೀಡಿದ್ದಾರೆ.

ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಬೇಸಿಗೆ ಶುರುವಾಗಿದೆ. ಪ್ರಾಣಿಗಳಿಗೆ ತೊಂದರೆ ಆಗದಂತೆ ಜೆಟ್ ಗಳು,ಸ್ಪ್ರಿಂಕ್ಲರ್ ಗಳ ಮೂಲಕ ನೀರು ಸಿಂಪಡಣೆ ಮಾಡುತ್ತಿದ್ದೇವೆ. ಈಗಾಗಲೇ ಆ ಕೆಲಸ ಆರಂಭವಾಗಿದೆ. ಮೃಗಾಲಯದಲ್ಲಿ ಒಟ್ಟು 45 ಕಡೆ ಈ ರೀತಿ ಜೆಟ್ ಸ್ಪ್ರಿಂಕ್ಲರ್ ಗಳ ಅಳವಡಿಸಲಾಗಿದೆ. ಗೋರಿಲ್ಲ, ಚಿಂಪಾಜಿ, ಕೋತಿಗಳಿಗೆ ಫ್ಯಾಮ್ ಏರ್ ಕೂಲರ್ ಗಳ ಅಳವಡಿಕೆ ಜೊತೆಗೆ ಐಸ್ ಬ್ಲಾಗ್, ಕಲ್ಲಂಗಡಿ ಹಣ್ಣುಗಳಂತ ತಂಪಾದ ಹಣ್ಣುಗಳ ಕೊಡುವ ಮೂಲಕ ಅವುಗಳ ದೇಹದಲ್ಲಿ ತಾಪಮಾನ ಹೆಚ್ಚಾಗದಂತೆ ನೋಡಿಕೊಳ್ಳುತ್ತೇವೆ.

ಜಿಂಕೆ,ಕಡವೆಗಳಿಗೆ ಅಲ್ಲಲ್ಲಿ ನೀರಿನ‌ ಕೊಳ,ಕೆಸರಿನ ಕೊಳಗಳ ನಿರ್ಮಾಣ ಮಾಡಲಾಗಿದೆ ನೆರಳಿಗೆ ಆಶ್ರಮಕ್ಕೆ ಶೆಟ್ ನಿರ್ಮಾಣ ಕೂಡ ಮಾಡಲಾಗಿದೆ. ಒಟ್ಟಾರೆ ಬೇಸಿಗೆ ನಿರ್ವಹಣೆಯನ್ನ ಸಮರ್ಪಕವಾಗಿ ನಿರ್ವಹಣೆ ಮಾಡುವ ಕೆಲಸವನ್ನ ನಮ್ಮ ಸಿಬ್ಬಂದಿಗಳ ಮಾಡುತ್ತಿದ್ದಾರೆ ಎಂದು ಮೃಗಾಲಯದ ಇ.ಡಿ ರಂಗಸ್ವಾಮಿ ಮಾಹಿತಿ ನೀಡಿದ್ದಾರೆ.

ಮಾರ್ಚ್ ತಿಂಗಳು ಶಾಲಾ ಕಾಲೇಜುಗಳ ಪರೀಕ್ಷಾ ಸಮಯವಾಗಿದ್ದು, ಪ್ರವಾಸಿಗರಿಲ್ಲದೆ ಬಣಗುಡುತ್ತಿರುವ ಮೈಸೂರಿನ ಮೃಗಾಲಯ. ಕಳೆದ ನವಂಬರ್, ಡಿಸೆಂಬರ್ ಜನವರಿ ತಿಂಗಳುಗಳಲ್ಲಿ ಪ್ರವಾಸಿಗರಿಂದ ಮೃಗಾಲಯ ತುಂಬಿ ತುಳುಕುತ್ತಿತ್ತು. ಫೆಬ್ರವರಿ, ಮಾರ್ಚ್ ನಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ.

ಜನರಿಲ್ಲದೆ ಮೈಸೂರು ಜೂ ಬಿಕೋ ಎನ್ನುತ್ತಿದೆ. ಅಲ್ಲೊಬ್ಬ ಇಲ್ಲೊಬ್ಬ ಎಂಬಂತೆ ಬೆರಳೆಣಿಕೆ ಮಂದಿ ಓಟಾಟ. ಪ್ರತಿ ವರ್ಷ ಮಾರ್ಚ್ ತಿಂಗಳು ಪ್ರವಾಸಿಗರು ಬಹಳ ಕಡಿಮೆ ಭೇಟಿ ಕೊಡುತ್ತಾರೆ ಇದಕ್ಕೆ ಕಾರಣ ಮುಖ್ಯವಾಗಿ ಈ ಸಮಯದಲ್ಲಿ ಶಾಲಾ ಕಾಲೇಜು ಮಕ್ಕಳಿಗೆ ಪರೀಕ್ಷೆಗಳು ನಡೆಯುತ್ತಿರುತ್ತದೆ. ಈ‌ ತಿಂಗಳು ಕಳೆದ ಮೇಲೆ ಬೇಸಿಗೆ ರಜೆ ಆರಂಭವಾಗುತ್ತದೆ. ಆಗ ಹೆಚ್ಚು ಹೆಚ್ಚು ಜನರು ಮೃಗಾಲಯಕ್ಕೆ ಭೇಟಿ ಕೊಡುತ್ತಾರೆ ಎನ್ನುವುದು ಮೃಗಾಲಯದ ಸಿಇಒ ರಂಗಸ್ವಾಮಿ ಹೇಳಿಕೆ ನೀಡಿದ್ದಾರೆ.