ಮೈಸೂರು: ವಿಶ್ವ ವಿಖ್ಯಾತ ನಾಡಹಬ್ಬ ದಸರಾ 2025 ಹಿನ್ನಲೆ ಗಜಪಡೆಗೆ ತಾಲೀಮು ಅದ್ದೂರಿಯಾಗಿ ನಡೆಯುತ್ತಿದೆ. ಕಾಡಿನಿಂದ ನಾಡಿಗೆ ಆಗಮಿಸಿರುವ ಕ್ಯಾಪ್ಟನ್  ಅಭಿಮನ್ಯು ತಂಡದ ಆನೆಗಳು ಜಂಬೂಸವಾರಿಗಾಗಿ ಸಜ್ಜಾಗುತ್ತಿವೆ.

ಅರಮನೆಯಿಂದ  ಹೊರಟ ಗಜಪಡೆ ಗಜಗಾಂಭೀರ್ಯವಾಗಿ ಹಾಕಿದ ಹೆಜ್ಜೆಗಳನ್ನ ಸಾರ್ವಜನಿಕರು ಕಣ್ತುಂಬಿಕೊಂಡಿದ್ದಾರೆ. 9 ಆನೆಗಳೂ ತಾಲೀಮಿನಲ್ಲಿ ಭಾಗಿಯಾಗಿವೆ. ಕೆ.ಆರ್ ವೃತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದ ಸರ್ಕಲ್ ಬನ್ನಿ ಮಂಟಪ ರಸ್ತೆ ಮಾರ್ಗದಲ್ಲಿ ಗಜಪಡೆ ಸಾಗಿದೆ.ಮೊದಲ ಹಂತದಲ್ಲಿ ಸಾಮಾನ್ಯ ತಾಲೀಮು ನಡೆಯಲಿದೆ.

ಕೆಲವು ದಿನಗಳ ಬಳಿಕ ಮರಳಿನ‌ ಮೂಟೆ ಹೊತ್ತು ಸಾಗುವ ತಾಲೀಮು ನಡೆಯಲಿದೆ. ದಸರಾ ಸಮೀಪಿಸುತ್ತಿದ್ದಂತೆ ಮರದ ಅಂಬಾರಿ ತಾಲೀಮು ಮಾಡಲಾಗುತ್ತದೆ.