ಮೈಸೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರವಾಗಿ ಮೈಸೂರಿನಲ್ಲಿ ವಿನೂತನ ಪ್ರತಿಭಟನೆ ನಡೆಯಿತು.
ನಿದ್ರಿಸುವ ಚಳುವಳಿಯನ್ನು ರೈತರು, ಕನ್ನಡಪರ ಹೋರಾಟಗಾರರು ನಡೆಸಿದರು. ಮೈಸೂರಿನ ಹಾರ್ಡಿಂಗ್ ವೃತ್ತದಲ್ಲಿ ನಿದ್ರಿಸುತ್ತ ಪ್ರತಿಭಟನಕಾರರು ಪ್ರತಿಭಟನೆ ನಡೆಸಿದರು.
ನಮ್ಮ ರಾಜಕಾರಣಿಗಳು ನಿದ್ರೆಗೆ ಜಾರಿದ್ದಾರೆ. ಅಧಿಕಾರಕ್ಕೆ ಬಂದಾಗ ಯಾಕೆ ಮೇಕೆದಾಟು ಆಣೆಕಟ್ಟು ನಿರ್ಮಾಣ ಮಾಡುತ್ತಿಲ್ಲ. ಹೋರಾಟಗಳಿಂದ ಸರ್ಕಾರವನ್ನು ಬದಲಿಸಿದ ಉದಾಹರಣೆಗಳಿವೆ.
ಆದ್ದರಿಂದ ಸರ್ಕಾರ ಇಚ್ಛೆತ್ತುಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ತಮಿಳುನಾಡಿಗೆ ನೀರು ಬಿಡುವುದರಿಂದ ನಮ್ಮ ರೈತರು ಸಂಕಷ್ಟು ಎದುರಿಸುತ್ತಾರೆ. ಕಾವೇರಿ ನಮ್ಮದು, ಯಾವುದೇ ಕಾರಣಕ್ಕೂ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಪ್ರತಿಭಟನಾಕರಾರು ಹೇಳಿದರು.

