ಮೈಸೂರು: ದಸರಾ ಕಂಬಳ ಆಯೋಜನೆ ವಿಚಾರವಾಗಿ ಸಾಂಪ್ರದಾಯಿಕ ದಸರಾ ಆಚರಣೆಗೆ ಒತ್ತು ನೀಡಿ ಎಂದಿದ್ದೇವೆ. ಯದುವೀರ್ ಒಡೆಯರ್ ಮಾತಿಗೆ ನಮ್ಮ ಸಹಮತವಿದೆ. ವಾಣಿಜ್ಯೀಕರಣಕ್ಕಾಗಿ ಕಂಬಳ ಮಾಡೋದು ಬೇಡ ಎಂಬುದು ನಮ್ಮ ಅಭಿಪ್ರಾಯ. ಈ ಬಗ್ಗೆ ನಿನ್ನೆ ಸಿಎಂ ಗೆ ತಿಳಿಸಿದ್ದೇವೆ. ಯತೀಂದ್ರ ಸಿದ್ದರಾಮಯ್ಯ ಕೂಡ ಕಂಬಳಕ್ಕೆ ವಿರೋಧವಿದೆ. ಪ್ರತಿಭಟನೆ ಮಾಡುವುದಾಗಿ ಪರಿಸರವಾದಿಗಳು ಹೇಳಿದ್ದಾರೆ ಎಂದು ಸಿಎಂ ಡಿಕೆಶಿಗೆ ಮಾಹಿತಿ ಕೊಟ್ಟಿದ್ದಾರೆ. ಡಿಕೆ ಶಿವಕುಮಾರ್ ಏನು ತೀರ್ಮಾನ ಮಾಡ್ತಾರೋ ಗೊತ್ತಿಲ್ಲ. ನಾವು ನಮ್ಮ ಅಭಿಪ್ರಾಯ ಹೇಳಿದ್ದೇವೆ ಎಂದು ಮೈಸೂರಿನಲ್ಲಿ ಶಾಸಕ ಶ್ರೀವತ್ಸ ಹೇಳಿಕೆ ನೀಡಿದ್ದಾರೆ.
ಈ ಬಾರಿ ದಸರಾ ಉದ್ಘಾಟನೆ ಸುತ್ತೂರು ಶ್ರೀಗಳಿಂದ ಮಾಡಿಸಿ, ಮೈಸೂರಿನಲ್ಲಿ ಶಾಸಕ ಶ್ರೀವತ್ಸ ಹೇಳಿಕೆ ನೀಡಿದರು. ಈ ಬಾರಿ ದಸರಾವನ್ನು ಸುತ್ತೂರು ಶ್ರೀಗಳಿಂದ ಮಾಡಿಸಿ ಎಂದು ಮನವಿ ಮಾಡಿದ್ದೇನೆ. ದೇಶಕ್ಕೆ ಸುತ್ತೂರು ಮಠದ ಕೊಡುಗೆ ದೊಡ್ಡದಿದೆ. ಕಳೆದ 25 ವರ್ಷಗಳಿಂದ ಸುತ್ತೂರು ಪರಂಪರೆಗೆ ದಸರಾ ಉದ್ಘಾಟನೆ ಮಾಡಲು ಅವಕಾಶ ಸಿಕ್ಕಿಲ್ಲ. ಈ ಬಾರಿ ಅವಕಾಶ ಕೊಡಿ ಎಂದು ಕೇಳಿದ್ದೇನೆ ಎಂದರು.
ಆಷಾಡ ಮಾಸದಲ್ಲಿ 2 ಸಾವಿರ ಟಿಕೆಟ್ ದುಬಾರಿಯಾಗಿದೆ. ಅದನ್ನು ಕಡಿಮೆ ಮಾಡುವಂತೆಯೇ ಸಿಎಂ ಬಳಿ ಚರ್ಚೆ ಮಾಡಿದ್ದೇವೆ. ಇಲ್ಲದಿದ್ದರೆ ದುಡ್ಡು ಇರುವವರು ತಾಯಿಯ ದರ್ಶನ ಮಾಡುತ್ತಾರೆ ಎಂಬ ಖ್ಯಾತಿ ಬರತ್ತೆ, ದಸರಾದ ಪಾಸ್ ವಿಚಾರದಲ್ಲಿ ಕೂಡ ದ್ವನಿ ಎತ್ತಿದ್ದೇವೆ ಎಂದರು. ಜನರಿಗೆ ಪಾಸ್ ಸಿಗಬೇಕು. ಹೀಗಾಗಿ ಆನ್ ಲೈನ್ ನಲ್ಲಿ ಪಾಸ್ ಮಾರಾಟ ಮಾಡುವ ಕ್ರಮ ಆಗ್ಬೇಕು. ಎಂ. ಪಿ ಎಲ್.ಎಲ್ ಎ ಗಳಿಗೆ ಪಾಸ್ ಬೇಡ ಎಂಬ ಮಹಾರಾಜ ಸಂಸದ ಯದುವೀರ್ ಒಡೆಯರ್ ತೀರ್ಮಾನಕ್ಕೆ ನನ್ನ ಸಹಮತವಿದೆ ಎಂದು ಮೈಸೂರಿನಲ್ಲಿ ಶಾಸಕ ಶ್ರೀವತ್ಸ ಹೇಳಿಕೆ ನೀಡಿದರು.

