ಮೈಸೂರು: ನಾಡಹಬ್ಬ ದಸರಾ ಉದ್ಘಾಟಕರಾಗಿ ಭಾನು ಮುಸ್ತಾಕ್ ಆಯ್ಕೆ ವಿಚಾರವಾಗಿ ನಾಳೆ ಜಿಲ್ಲಾಡಳಿತದಿಂದ ಅಧಿಕೃತ ಆಹ್ವಾನಕ್ಕೆ ನಿರ್ಧಾರವಾಗಿದೆ.
ನಾಳೆ ಸಂಜೆ 4 ಗಂಟೆಗೆ ಹಾಸನದಲ್ಲಿರುವ ಭಾನು ಮುಸ್ತಾಕ್ ಸ್ವಗೃಹದಲ್ಲಿ ಆಹ್ವಾನ ನೀಡಲಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ಜಿಲ್ಲಾಡಳಿತ ಹೊರಡಿಸಿದೆ.
ಭಾನು ಮುಸ್ತಾಕ್ ಗೆ ಅಧಿಕೃತ ಜಿಲ್ಲಾಡಳಿತ ಆಹ್ವಾನ ನೀಡಲಿದೆ. ಸರ್ಕಾರದ ಪರವಾಗಿ ಜಿಲ್ಲಾಡಳಿತಂದಿಂದ ನಾಳೆ ಅಧಿಕೃತ ಆಹ್ವಾನಕ್ಕೆ ಸಿದ್ಧತೆ ನಡೆಯುತ್ತಿದೆ.

