ಎಚ್.ಡಿ. ಕೋಟೆ: ಎಡತೊರೆ ಹಿರಿಯ ಪ್ರಾಥಮಿಕ ಶಾಲೆಯ 25/26 ನೇ ಸಾಲಿಗೆ ಮಂತ್ರಿಮಂಡಲದ ಸಚಿವ ಸ್ಥಾನಕ್ಕಾಗಿ ನಡೆಯುತ್ತಿರುವ ಚುನಾವಣೆ ಅತ್ಯಂತ ಕುತೂಹಲಕಾರಿಯಾಗಿದೆ, ಶಾಲೆಯ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವ ಸ್ಥಾನಕ್ಕೆ ತೀವ್ರವಾದ ಪೈಪೋಟಿ ಏರ್ಪಟ್ಟು 12 ಮಂದಿ ಆಯ್ಕೆಗೆ 26 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

ಅಂತಿಮ ಹಂತದವರೆಗೂ ಶಿಕ್ಷಕರು ಮತ್ತು ಎಸ್ ಡಿ ಎಮ್ ಸಿ ಸದಸ್ಯರು ಮಕ್ಕಳ ಮನವಲಿಸಿ ಅವಿರೋಧ ಆಯ್ಕೆಗೆ ಕಸರತ್ತು ನಡೆಸಿದರು ಯಾವುದೇ ಪ್ರಯೋಜನವಾಗದೆ ಚುನಾವಣೆ ನಡೆಸಲು ಮುಂದಾಗಿದ್ದಾರೆ, ಇಂದು ಮಧ್ಯಾಹ್ನ ನಡೆಯುವ ಮತದಾನದಲ್ಲಿ ಜಯದ ಮಾಲೆ ಯಾರ ಕೊರಳಿಗೆ ಬೀಳುವುದೋ ಕಾದು ನೋಡಬೇಕಾಗಿದೆ.

