ನಂಜನಗೂಡು : 2022 ರಲ್ಲಿ ಸುರಿದ ಧಾರಾಕಾರ ಮಳೆ ಮತ್ತು ಪ್ರವಾಹಕ್ಕೆ ಅನಾದಿ  ವಾಸವಿದ್ದ ಅನಾದಿಕಾಲದ ಮಣ್ಣಿನ ಗೋಡೆಯ ಮನೆ ಕುಸಿತ ಕಂಡು ಸತತ ಮೂರು ವರ್ಷಗಳಿಂದ ಇಡೀ ಕುಟುಂಬವೇ ಬೀದಿಗೆ ಬಿದ್ದಿದ್ದೇವೆ.

ನಮ್ಮ ಸಂಕಷ್ಟವನ್ನು ಪರಿಶೀಲಿಸಿದ ಕಂದಾಯ ಅಧಿಕಾರಿಗಳು ನಾವು ಲಂಚದ ಹಣ ನೀಡಿಲ್ಲ ಎಂಬ ಹಿನ್ನೆಲೆ ಎ ಪಟ್ಟಿಗೆ ಸೇರ್ಪಡೆಯಾಗಬೇಕಿದ್ದ ವಾಸದ ಮನೆಯನ್ನು ರದ್ದುಗೊಳಿಸಿದ್ದಾರೆ ಮೂರು ವರ್ಷಗಳಿಂದ ಸಿಎಂ ಕಚೇರಿ ಸಮೇತ ಪ್ರತಿಯೊಬ್ಬ ಅಧಿಕರಿಗೂ ನಾನು ದೂರು ನೀಡಿ ಮನವಿ ಮಾಡಿಕೊಂಡಿದ್ದೆ ಯಾವೊಬ್ಬ ಅಧಿಕಾರಿಗಳು ಕೂಡ ನಮ್ಮ ಸಂಕಷ್ಟಕ್ಕೆ ಸ್ಪಂದಿಸಿಲ್ಲ ಸಾಲ ಸೋಲ ಮಾಡಿ ಕಂದಾಯ ಇಲಾಖೆಯ ಎಸ್ ಡಿ ಎ ಅಧಿಕಾರಿ ಮೋಹನ ಕುಮಾರಿ ಎಂಬುವರಿಗೆ ಹತ್ತು ಸಾವಿರ ರೂ ಲಂಚ ನೀಡಿದ್ದೇನೆ ಹಾಗಿದ್ದರೂ ಕೂಡ ನನಗೆ ವಾಸದ ಮನೆಯನ್ನು ಕಲ್ಪಿಸಿಲ್ಲ ಈ ಸಭೆಯಲ್ಲಿ ಇರುವ ತಹಸೀಲ್ದಾರ್ ನಾಲಾಯಕ್ ಅಧಿಕಾರಿ ಅವರ ವಿರುದ್ಧವೇ ಶಿಸ್ತು ಕ್ರಮ ಕೈಗೊಳ್ಳಿ ಎಂದು ಕಳಲೆ ಗ್ರಾಮದ ಮನೆ ಕಳೆದುಕೊಂಡ ನೊಂದ ವ್ಯಕ್ತಿ ಗಾಂಧಿ ಎಂಬುವರು ದೂರು ನೀಡಿ ಲೋಕಾಯುಕ್ತ ಅಧಿಕಾರಿ ಮುಂದೆ ಅಬ್ಬರಿಸಿದರು.

ನಂಜನಗೂಡಿನ ತಾಲೂಕು ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ಮೈಸೂರಿನ ಲೋಕಾಯುಕ್ತ ಇನ್ಸ್ಪೆಕ್ಟರ್ ಉಮೇಶ್ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ದೂರು ಸ್ವೀಕಾರ ಸಭೆಯನ್ನು ಆಯೋಜನೆ ಮಾಡಲಾಗಿತ್ತು.

ನಂಜನಗೂಡಿನ ತಹಶೀಲ್ದಾರ್ ಶಿವಕುಮಾರ್ ಕಾಸನೂರು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್ ಸಭೆಯಲ್ಲಿ ಹಾಜರಿದ್ದರು. ತಾಲೂಕಿನ ವಿವಿಧ ಗ್ರಾಮಗಳಿಂದ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಲು ಸಾಕಷ್ಟು ದೂರುದಾರರು ಕೂಡ ಸಭೆಗೆ ಹಾಜರಾಗಿ ಕಂದಾಯ ಮತ್ತು ತಾಲೂಕು ಪಂಚಾಯಿತಿಗೆ ಸಂಬಂಧಪಟ್ಟ ಒಟ್ಟು 16 ದೂರು ಅರ್ಜಿಗಳನ್ನು ಲೋಕಾಯುಕ್ತ ಇನ್ಸ್ಪೆಕ್ಟರ್ ಉಮೇಶ್ ರವರಿಗೆ ದೂರುದಾರರು ಸಲ್ಲಿಸಿದರು.

ಈಗಾಗಲೇ ಸಭೆಯಲ್ಲಿ ದೂರುಗಳನ್ನು ಪರಿಶೀಲಿಸಲಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ವಿತರಿಸಲಾಗಿದೆ ಸಮಸ್ಯೆ ಬಗೆಹರಿಸಲು ತಿಳಿ ಹೇಳಲಾಗಿದೆ ತಪ್ಪಿದ್ದಲ್ಲಿ ಮೈಸೂರು ಲೋಕಾಯುಕ್ತ ಕಚೇರಿಗೆ ದಾವಿಸಿ ಸಮಸ್ಯೆಗಳ ಬಗ್ಗೆ ವಿಚಾರ ಮುಟ್ಟಿಸಬೇಕು ಎಂದು ಸಭೆಯಲ್ಲಿ ಲೋಕಾಯುಕ್ತ ಇನ್ಸ್ಪೆಕ್ಟರ್ ಪಿ.ಉಮೇಶ್ ತಿಳಿಸಿದರು.

ಸಭೆಯಲ್ಲಿ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್ ಸರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.