ಮೈಸೂರು: ಕಾಂಗ್ರೆಸ್ ಸರ್ಕಾರ ಯಾರನ್ನು ಓಲೈಕೆ ಮಾಡುತ್ತಿಲ್ಲ. ಬಿಜೆಪಿ-ಜೆಡಿಎಸ್ ಅಭಿವೃದ್ಧಿ ವಿಚಾರದಲ್ಲಿ ಹೋರಾಟ ಮಾಡಲ್ಲ. ಬಿಜೆಪಿ-ಜೆಡಿಎಸ್ ನಾಯಕರು ಯಾರಾದರೂ ಹಿಂದೂಗಳಿಗೆ ಸಹಾಯ ಮಾಡಿದ್ದಾರೆ. ಧರ್ಮ ವಿಚಾರ ಮುಂದಿಟ್ಟು ನೆಲೆ ನಿಲ್ಲಲು ಬಿಜೆಪಿ ಯತ್ನ ನಡೆಸುತ್ತಿದೆ. ಧರ್ಮಸ್ಥಳ ವಿರುದ್ಧ ಹೋರಾಟ ಬಿಜೆಪಿ-ಜೆಡಿಎಸ್ ಕೃಪಾಪೋಷಿತ ಎಂದು ಮದ್ದೂರು ಶಾಸಕ ಕದಲೂರು ಉದಯ್ ಹೇಳಿದರು.
ಅತೀ ಹೆಚ್ಚು ಅನುದಾನ ಮಂಡ್ಯ ಜಿಲ್ಲೆ ಬಂದಿರುವುದು ಕಾಂಗ್ರೆಸ್ ಸರ್ಕಾರದಲ್ಲಿ. ಹಿಂದೆ ಅಧಿಕಾರದಲ್ಲಿದ್ದವರೆಲ್ಲಾ ಏನು ಕೊಡುಗೆ ಕೊಟ್ಟಿದ್ದಾರೆ. ಅಂಬರೀಶಣ್ಣ ಜೊತೆಗೆ ಬಹಳ ವರ್ಷದ ಒಡನಾಟ.
ಅಂಬರೀಶಣ್ಣ ಇದ್ದಾಗ ಸುಮಲತಾರವರು ಯಾವತ್ತು ರಾಜಕಾರಣ ಮಾಡಿರಲಿಲ್ಲ. ಅಂಬರೀಶ್ ಅಣ್ಣ ಕಾಲವಾದ ನಂತರ ಎಂಪಿ ಆದರು. ಬಿಜೆಪಿ ಜೊತೆ ಸೇರಿ ಅವರ ಗಾಳಿ ಬೀಸಿದೆ. ಬುದ್ದಿವಂತಿಕೆಯಿಂದ ಮಾತನಾಡ್ತಿದ್ದವರು ಬಿಜೆಪಿಯವರಂತೆಯೇ ಮಾತನಾಡಲು ಶುರುಮಾಡಿದ್ದಾರೆ.
ಕಲ್ಲು ಹೊಡೆಯಲು ಬಿಜೆಪಿಯವರೇ ಪ್ರಚೋದಿಸಿದ್ದಾರೆ. ಆರ್ ಅಶೋಕ್, ಯಡಿಯೂರಪ್ಪ ಹಾದಿಯಾಗಿ ರಂಜಾನ್‌ಗೆ ಹೋಗಿ ಬಿರಿಯಾನಿ ತಿಂದಿದ್ದಾರೆ. ಘಟನೆ ಪೂರ್ವ ನಿಯೋಜಿತ ಇರಬಹುದು ತನಿಖೆಯಾಗಲಿ ಎಂದರು.

