ಮೈಸೂರು : ಇಷ್ಟು ದಿನ‌ ಹಿಂದೂ ವಿರೋಧಿ ಆಗಿದ್ದ ಸಿ‌ಎಂ ಈಗ ಪೊಲೀಸ್ ಇಲಾಖೆ ವಿರೋಧಿ ಆಗಿದ್ದಾರೆ. ಹಿಂದುಳಿದವರ ಉದ್ಧಾರಕ ಎಂದು ಹೇಳುವ ಸಿಎಂ ವಾಲ್ಮೀಕಿ ಸಮುದಾಯದ ನಿಷ್ಠಾವಂತ ಅಧಿಕಾರಿ ದಯಾನಂದ್ ರನ್ನು ಯಾಕೆ ಟಾರ್ಗೆಟ್ ಮಾಡಿದ್ದಾರೆ? ದಯಾನಂದ್ ಒಬ್ಬ ಸಮರ್ಥ ನಿಷ್ಠಾವಂತ ಅಧಿಕಾರಿ. ನಾಯಕ ಸಮುದಾಯದ ವ್ಯಕ್ತಿ ಮೇಲೆ ನಿಮಗೆ ಯಾಕೆ ಇಷ್ಟು ಕೋಪ ಎಂದು ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.

ಪೊಲೀಸ್ ಇಲಾಖೆ ಅನ್ ಫಿಟ್ ಅಲ್ಲ. ಸರಕಾರ ಅನ್ ಫಿಟ್. ಘಟನೆ ನಡೆದು ಒಂದು ವಾರವಾದರು ಸಿಎಂ ನೈತಿಕ ಹೊಣೆ ಹೊತ್ತಿಲ್ಲ. ಸಿಎಂ ನಾಲ್ಕು ಹನಿ ಕಣ್ಣೀರು ಹಾಕಿಲ್ಲ. ಅನುಕಂಪ, ಪಶ್ಚಾತ್ತಾಪದ ಮಾತು ಬಂದಿಲ್ಲ. ಕಾಲ್ತುಳಿತದ ವಿಚಾರ ಎರಡು ಗಂಟೆ ತಡವಾಗಿ ಗೊತ್ತಾಯಿತು ಎನ್ನುವುದಾದರೆ ನೀವು ರಾಜ್ಯ ಹೇಗೆ ಸಂಭಾಳಿಸುತ್ತೀರಿ? ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್ ರನ್ನು ಯಾಕೆ ತೆಗೆದು ಹಾಕಿದ್ರಿ. ಮೊದಲು ಈ ರಹಸ್ಯ ಬಿಚ್ಚಿಡಿ ಎಂದರು.

ಸಿಎಂ ತಮ್ಮ ಮೊಮ್ಮಗನಿಗೆ ಫೋಟೋಗ್ರಾಫ್, ಆಟೋಗ್ರಾಫ್ ಕೊಡಿಸಲು ಓಡುತ್ತಿದ್ದರೇನೋ. ಅದಕ್ಕೆ ಕಾಲ್ತುಳಿತ ವಿಚಾರ ಗೊತ್ತಾಗಿಲ್ಲ. ಸತ್ಯವತಿ ಯಾಕೆ ಒತ್ತಡ ಹೇರಿ ಕಾರ್ಯಕ್ರಮ ಮಾಡಿಸಿದರು. ಯಾಕೆ ಅವರನ್ನು ಇನ್ನೂ ನೀವು ಸಂಸ್ಪೆಡ್ ಮಾಡಿಲ್ಲ. ಯಾಕೆ ಅವರನ್ನು ರಕ್ಷಣೆ ಮಾಡುತ್ತಿದ್ದಿರಿ? ಸತ್ಯವತಿ ಅವರು ಯಾಕೆ ಅಭಿಮಾನಿಗಳಿಗೆ ಚಿನ್ನಸ್ವಾಮಿ ಸ್ಟೇಡಿಯಂ ಗೆ ಹೋಗಿ ಅಂತಾ ಹೇಳಿದ್ರು?
ಸಿಎಂ ಗೆ ಆಡಳಿತದ ಲಂಗು ಲಗಾಮು ಸಿಕ್ತಿಲ್ಲ ಎಂದರು.

11 ಜನರ ಸಾವಿಗೆ ಕಣ್ಣೀರು ಹಾಕಿ ಅವರ ಕುಟುಂಬಕ್ಕೆ ಹೋಗಿ ಸಾಂತ್ವನ ಹೇಳ ಬೇಕಾದ ಸಿಎಂ ಮದ್ವೆ ಮುಂಜಿ ಅಂತಾ ಓಡಾಡುತ್ತಿದ್ದಾರೆ. ಸಿಎಂ ಅವರೇ ನಿಮಗೆ ಮದ್ವೆ ಊಟ, ಬೀಗರ ಊಟನೇ ಮುಖ್ಯನಾ? ಸಂವೇದನ ರಹಿತ ವ್ಯಕ್ತಿ ಸಿಎಂ. ವಿಧಾನಸೌಧ ಕ್ಕೆ ನೀವು ಸಿಎಂ‌ ಅನ್ನುವುದಾದರೆ ನೀವು ಒಬ್ಬ ಸಿಎಂ ಅಲ್ಲ. ಈ ರಾಜ್ಯವನ್ನು ಅಧಿಕಾರಿಗಳಿಗೆ ಬರೆದು ಕೊಡಿ ಎಂದರು.

ಮೋದಿ ಸರಕಾರಕ್ಕೆ ಶೂನ್ಯ ಅಂಕ ನೀಡಿದ ಸಿಎಂ ಗೆ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ಮೋದಿಗೆ ಅಂಕ‌ ನೀಡುವ ಅರ್ಹತೆ ಸಿಎಂ ಗೆ ಇದ್ಯಾ? ಕೊಲೆಗಳ ಸರಣಿಗೆ ದಾರಿ ಮಾಡಿ ಕೊಟ್ಟಿದ್ದು ಯುವನಿಧಿ ಹೆಸರಿನಲ್ಲಿ ಟೋಪಿ ಹಾಕಿದ್ದು ಗೃಹಲಕ್ಷ್ಮಿ ಹೆಸರಲ್ಲಿ ಟೋಪಿ ಹಾಕಿದ್ದು ಸಿಎಂ ಸಾಧನೆ. ಪ್ರತಿ ನಿತ್ಯ ಜನರಿಗೆ ಟೋಪಿ ಹಾಕುವ ಸಿಎಂ ಗೆ ಮೋದಿ ಸಾಧನೆ ಅಳೆಯುವ ಅರ್ಹತೆ ಇದ್ಯಾ? ಮೈಸೂರಿಗೆ ಮೋದಿ ಕೊಡುಗೆ ಬಹಳ ಇದೆ. ನೀವೇನೂ ಕೊಟ್ಟಿದ್ದಿರಾ ಮೈಸೂರಿಗೆ ಹೇಳಿ, ಮೈಸೂರಿಗೆ ಬೀಗರ ಊಟಕ್ಕೆ ಬರೋದು, ಮಾಧ್ಯಮದ ಮುಂದೆ ಉಡಾಫೆ ಹೇಳಿಕೆ ಕೊಡುವುದಷ್ಟೆ ಸಿಎಂ ಕೆಲಸ. ಅವರಿಗೆ ಮೋದಿ ಸಾಧನೆ ಏನ್ ಗೊತ್ತಿದೆ ಹೇಳಿ ಎಂದರು.