ನಂಜನಗೂಡು: ಐತಿಹಾಸಿಕ ಕಾರ್ಯ ಶ್ರೀ ಸಿದ್ದೇಶ್ವರ ಸ್ವಾಮಿ ರಥೋತ್ಸವದ ಆರಂಭದಲ್ಲಿ ದಟ್ಟ ಮುರಿದಿದೆ.

ನಂಜನಗೂಡು ತಾಲೂಕಿನ ದೊಡ್ಡ ಕವಲಂದೆ ಹೋಬಳಿಯ ಕಾರ್ಯ ಗ್ರಾಮದಲ್ಲಿ ನಡೆಯುತ್ತಿರುವ ಶ್ರೀ ಸಿದ್ದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದಲ್ಲಿ ಪ್ರಮುಖ ಆಕರ್ಷಣೀಯ ಕೇಂದ್ರವಾಗಿರುವ 25 ಅಡಿ ಎತ್ತರದ ರಥೋತ್ಸವ (ಖುರ್ಜು) ಅನ್ನು ಎತ್ತುವಾಗ ಕೆಳಗಡೆ ಕಟ್ಟಿರುವ ಮರದ ದಟ್ಟೆ ಬಾಯ್ಬಿಟ್ಟಿದೆ.

600 ಅಡಿ ಎತ್ತರದ ಶ್ರೀ ಸಿದ್ದೇಶ್ವರ ಬೆಟ್ಟಕ್ಕೆ ರಥೋತ್ಸವವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಲಾಗುತ್ತದೆ. ರಥೋತ್ಸವದ ಚಕ್ರದ ಮೇಲೆ ಅಳವಡಿಸುವ ವೇಳೆ ಈ ಘಟನೆ ಸಂಭವಿಸಿದೆ. ಸ್ಥಳದಲ್ಲಿ ಕವಲಂದೆ ಪೊಲೀಸರು ಬಿಡು ಬಿಟ್ಟಿದ್ದಾರೆ.