ಮೈಸೂರು: ಸಪ್ತಗ್ರಾಮಗಳ ಆದಿ ದೇವತೆ ತಾಯಿ ಹುಣಸಮ್ಮನವರ ರಥೋತ್ಸವ ಜಿಲ್ಲೆಯ ಮಿರ್ಲೆ ಗ್ರಾಮಸೇರಿದಂತೆ ಒಂಬತ್ತು ಗ್ರಾಮಗಳ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ, ಯಶಸ್ವಿಯಾಗಿ ನಡೆಯಿತು.
ಐದು ಸಿಡಿಗಳು ನಾಲ್ಕು ರಥಗಳು ಸೇರಿದಂತೆ ತಾಯಿರಥದ ಮೇಲೆ ಕುಳಿತಿದ್ದ ಪಾರ್ವತಿ ಸ್ವರೂಪಿಣಿ ಹುಣಸಮ್ಮ ತಾಯಿಯನ್ನು ಹೂವು ತೋರಣಗಳಿಂದ ಸಿಂಗರಿಸಿ ಮೂರು ಸುತ್ತು ಮೆರವಣಿಗೆಯಲ್ಲಿ ದೇವಿಯನ್ನು ಆರಾಧಿಸುತ್ತಾ ವಿಜಯ ಘೋಷಣೆಗಳೊಂದಿಗೆ ಮೆರವಣಿಗೆಯಲ್ಲಿ ತೆರಳಿ ಗಮನಸೆಳೆಯಿತು.
ಮೆರವಣಿಗೆಯುದ್ದಕ್ಕೂ ಸಾವಿರಾರು ಭಕ್ತರು ಹಣ್ಣು ಹೂವು ಜಾವನಾಗಳನ್ನು ಆಯಾ ಗ್ರಾಮದ ರಥ ಮತ್ತು ಸಿಡಿಗಳಿಗೆ ಎಸೆಯುವ ಮೂಲಕ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಹೊತ್ತ ಹರಕೆಯನ್ನು ತೀರಿಸುವ ಮೂಲಕ ದೇವಿಯ ಕೃಪೆಗೆ ಪಾತ್ರರಾದರು ಮಿರ್ಲೆ ಗ್ರಾಮದುದ್ದಕ್ಕೂ ದೇವಾಲಯದ ಆವರಣದ ಉದ್ದಗಲಕ್ಕೂ ಬಿಸಿಲಿನ ತಾಪದಿಂದ ಬಳಲಿದ್ದ ಭಕ್ತರಿಗೆ ಸಿಹಿ ಪಾನಕ ಮಜ್ಜಿಗೆ ನೀರು ಸೇರಿದಂತೆ ಪ್ರಸಾದವನ್ನು ನೀಡಲಾಯಿತು. ಪ್ರಸಾದವನ್ನು ಸ್ವೀಕರಿಸಿದ ಭಕ್ತರು ದೇವಿಯನ್ನು ಆರಾಧಿಸುತ್ತಿದ್ದ ದೃಶ್ಯಗಳು ಕಂಡುಬಂದವು.
ರಥೋತ್ಸವದಲ್ಲಿ ಶಾಸಕರಾದ ಡಿ ರವಿಶಂಕರ್, ಕೆ ಪಿ ಸಿ ಸಿ ಸದಸ್ಯರಾದ ದೊಡ್ಡಸ್ವಾಮಿಗೌಡ ಮಾಜಿ ಸಚಿವ ಸಾರಾ ಮಹೇಶ್, ತಹಸೀಲ್ದಾರ್ ನರಗುಂದ ಮಿರ್ಲೆ ಉಪ ತಹಸಿಲ್ದಾರ್ ಮಹೇಶ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಾಲು ಮಾಜಿ ಅಧ್ಯಕ್ಷ ವಿಶ್ವನಾಥ್ ಧರ್ಮದರ್ಶಿ ಎಂ ಎನ್ ಲೋಕೇಶ್ ಪ್ರಧಾನ ಅರ್ಚಕ ಎಂಎಲ್ ಕುಮಾರಸ್ವಾಮಿ ಮುಖಂಡರುಗಳಾದ ಮಿರ್ಲೆ ನಂದೀಶ್,ಎಮ್. ಆರ್ ಹರೀಶ್, ಹೊಸಟ್ಟಿ ರಘು, ಉದ್ಯಮಿ ಹಳಿಯೂರು ಮಧುಚಂದ್ರ, ಪ್ರಕಾಶ್ ಸೇರಿದಂತೆ ಒಂಬತ್ತು ಗ್ರಾಮಗಳ ಮುಖಂಡರು ಭಕ್ತರು ಭಾಗವಹಿಸಿದ್ದರು.

