ಮೈಸೂರು: ಶಬರಿಮಲೆಗೆ ತೆರಳಿದ್ದ ಬಸ್ ಪಲ್ಟಿಯಾಗಿದ್ದು, ಘಟನೆಯಲ್ಲಿ ಓರ್ವ ಸಾವು ಹಲವರ ಸ್ಥಿತಿ ಚಿಂತಾಜನಕವಾಗಿದೆ.

ಶನಿವಾರ ಕೇರಳದ ಕಾಸರಗೂಡು ಸಮೀಪ ಕಟ್ಟಮ್ಕಾವಲ್ಎಂಬ ಊರಿನ ಬಳಿ ಘಟನೆ ನಡೆದಿದೆ. ಕೆ.ಆರ್ ನಗರ ತಾಲ್ಲೂಕಿನ ಚಿಕ್ಕಕೊಪ್ಪಲು ಗ್ರಾಮದಿಂದ ಶಬರಿಮಲೆಗೆ ಭಕ್ತರು ತೆರಳಿದ್ದರು. ದರ್ಶನ ಮುಗಿಸಿ ಹಿಂದಿರುಗುವಾಗ ಘಟನೆ ನಡೆದಿದೆ.

36 ವರ್ಷದ ಹರೀಶ್ ಮೃತ ದುರ್ದೈವಿ. ಗಂಭೀರವಾಗಿ ಗಾಯಗೊಂಡಿರುವ ಅರವಿಂದ ಎಂಬುವನಿಗೆ ಕೇರಳದ ಕ್ಯಾಲಿಕಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ  ನೀಡಲಾಗುತ್ತಿದೆ. ಮತ್ತೊರ್ವ ಗಂಭೀರವಾಗಿ ಗಾಯಗೊಂಡಿರುವ  ಅಭಯ್  ಮಂಗಳೂರಿನ ಯೆನೊಪೋಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಳಿದವರಿಗೆ ಮೈಸೂರಿನ ಸುಯೋಗ್ ಆಸ್ಪತ್ರೆಗೆ ರವಾನೆ  ಮಾಡಲಾಗಿದೆ. ಶಬರಿಮಲೆಗೆ ಕರ್ನಾಟಕದಿಂದ ಕೊಟ್ಯಾಂತರ ರೂ ಆದಾಯ ಸಂದಾಯವಾಗುತ್ತೆ. ಶಬರಿಮಲೆಗೆ ತೆರಳಿದ್ದವರು ಎಲ್ಲರೂ ರೈತಾಪಿ ಕುಟುಂಬದವರು. ಸರ್ಕಾರ ಈ ಘಟನೆಯನ್ನು ಕೇರಳ ಸರ್ಕಾರ ಗಮನಕ್ಕೆ ತಂದು ಮೃತ ಮತ್ತು ಗಾಯಾಳು ಕುಟುಂಬಕ್ಕೆ ಪರಿಹಾರ ನೀಡಬೇಕು. ಕರ್ನಾಟಕ ಸರ್ಕಾರಕ್ಕೆ ರೈತ ಮುಖಂಡ  ಮಂಜುಕಿರಣ್ ಒತ್ತಾಯಿಸಿದ್ದಾರೆ.