ತಿ.ನರಸೀಪುರ: ಶ್ರೀ ಶನೇಶ್ವರ ಸ್ವಾಮಿಯ 17ನೇ ವರ್ಷದ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಟಿ.ನರಸೀಪುರ ತಾಲೂಕಿನ ಚಿಟಿಗಯ್ಯನ ಕೊಪ್ಪಲು ಗ್ರಾಮದಲ್ಲಿ ನಡೆಯಿತು. ಶನೇಶ್ವರಸ್ವಾಮಿ ಗುಡ್ಡಪ್ಪ ಬಸವರಾಜು ವತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಯಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಾಟಾಳ್ ಮಠದ ಶ್ರೀ ಸಿದ್ದಲಿಂಗ ಶಿವಚಾರ್ಯ ಸ್ವಾಮಿಜಿ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗುವ ಮೂಲಕ ಖೋ ಖೋ ವಿಶ್ವಕಪ್ ವಿಜೇತೆ ಚೈತ್ರ ಬಿ ಕುರುಬೂರು ಉದ್ಘಾಟಿಸಿದರು.

ಡೊಳ್ಳುಕುಣಿತ, ಕಂಸಾಳೆ, ವೀರಗಾಸೆ, ದೇವರ ಕೂಟಗಳು ಶನೇಶ್ವರ ಸ್ವಾಮಿಯ ಫೋಟೋ ದೊಂದಿಗೆ ಮೆರವಣಿಗೆ ಮಾಡಲಾಯಿತು. ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಚಲನ ಚಿತ್ರನಟ ಮಿಮಿಕ್ರಿ ಗೋಪಿ ಆಸೆ ಕಾರ್ಯಕ್ರಮ ನಡೆಸಿಕೊಟ್ಟು ಜನರನ್ನು ರಂಜಿಸಿದರು.

ಈ ಸಂದರ್ಭ ಕುರುಬರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಶ್, ಉಪನ್ಯಾಸಕ ಮೂಗೂರು ಕುಮಾರಸ್ವಾಮಿ, ಅಮ್ಮನ ಮಡಿಲು ಸಾಮಾಜಿಕ ಸಾಂಸ್ಕೃತಿಕ ಕಲಾ ಟ್ರಸ್ಟ್ ಅಧ್ಯಕ್ಷೆ ವರಲಕ್ಷ್ಮಿ, ರಾಜೇಶ್ ಸಿ ಕೆ, ಬಸವರಾಜು, ಸೇರಿದಂತೆ ಮತ್ತಿತರು ಇದ್ದರು.