ಮೈಸೂರು: ಮಾಲೀಕನ ಮನೆಯನ್ನು ಬಾಡಿಗೆದಾರರು ದೋಚಿದ ಘಟನೆ ಪಿರಿಯಾಪಟ್ಟಣ ತಾಲೂಕಿನ ಆವರ್ತಿ ಗ್ರಾಮದಲ್ಲಿ ನಡೆದಿದೆ.

ಮನೆಯಲ್ಲಿ ಯಾರೂ ಇಲ್ಲದ ವೇಳೆ ಜೋಡಿ ಕೈ ಚಳಕ ನಡೆಸಿದ್ದಾರೆ. ಮಂಜುನಾಥ್, ನಯನ ದಂಪತಿಯಿಂದ ಮನೆ ಕಳ್ಳತನ ನಡೆಸಲಾಗಿದೆ. ನಿವೃತ್ತ ಶಿಕ್ಷಕ ನಾಗಯ್ಯ, ಮಂಜುಳಾ ಮನೆಯಲ್ಲಿ ಕಳ್ಳತನ ನಡೆದಿದೆ. ಜೂ.21 ರಂದು ಬೈಲುಕೊಪ್ಪ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಜೂ.13 ರಂದು ಮನೆ ಬೀಗ ಹಾಕಿ ಮೈಸೂರಿಗೆ ಶಿಕ್ಷಕ ದಂಪತಿ ಹೋಗಿದ್ದರು. ಇದೇ ವೇಳೆ ಬೀರುವಿನಲ್ಲಿ ಇಟ್ಟಿದ್ದ 45 ಗ್ರಾಂ ತೂಕದ ಚಿನ್ನಾಭರಣ ದರೋಡೆ ಮಾಡಲಾಗಿದೆ. ಚಿನ್ನ ದೋಚಿ ಅರ್ಟಿಕ್ ಗೋಲ್ಡ್ ಫೈನಾನ್ಸ್ ಗೆ ಮಾರಾಟ ಮಾಡಲಾಗಿದೆ. 6,8 ಲಕ್ಷಕ್ಕೆ ಚಿನ್ನ ಮಾರಾಟ ಮಾಡಿ ಆರೋಪಿಗಳು ಹಣ ಬಚ್ಚಿಟ್ಟಿದ್ದರು. ಮಂಜುನಾಥ್, ನಯನ ಬೈಲುಕೊಪ್ಪ ಪೊಲೀಸರು ವಶಕ್ಕೆ ಪಡೆದಿದ್ದಾರೆ.

