ಮೈಸೂರು: ಪ್ರಧಾನಿ ನರೇಂದ್ರ ಮೋದಿ ಮೈಸೂರು ಭೇಟಿ ವೇಳೆ ಬೆಂಗಾವಲಿಗೆ ಬಂದಿದ್ದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.
ನಿನ್ನೆ ಮಧ್ಯಾಹ್ನ 3.20ಕ್ಕೆ ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್‌ಗೆ ಪ್ರಧಾನಿ ಮೋದಿ ಆಗಮಿಸಿದ್ದರು. ಪ್ರಧಾನಿ ಆಗಮನಕ್ಕೆ ಮೂರು ಹೆಲಿಕಾಪ್ಟರ್‌ಗಳು ಬಂದಿದ್ದವು. ಈ ಪೈಕಿ ಒಂದು ಹೆಲಿಕಾಪ್ಟರ್‌ನಲ್ಲಿ ಮೋದಿ ಬಂದಿಳಿದಿದ್ದರು. ಉಳಿದ ಎರಡು ಹೆಲಿಕಾಪ್ಟರ್‌ಗಳು ಬೆಂಗಾವಲಾಗಿ ಬಂದಿದ್ದವು.
ಪ್ರಧಾನಿ ಲ್ಯಾಂಡಿಂಗ್ ಬಳಿಕ ಮೂರು ಹೆಲಿಕಾಪ್ಟರ್‌ಗಳು ಟೇಕ್‌ಆಫ್ ಆಗಬೇಕಿತ್ತು. ಆದರೆ ಎರಡು ಹೆಲಿಕಾಪ್ಟರ್‌ಗಳು ಮಾತ್ರ ಟೇಕ್‌ಆಫ್ ಆಗಿದ್ದು, ಮತ್ತೊಂದು ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಲಲಿತಮಹಲ್ ಹೆಲಿಪ್ಯಾಡ್‌ನಲ್ಲೇ ಉಳಿದಿದೆ.

