ಮೈಸೂರು : ಹೆಚ್.ಡಿ.ಕೋಟೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಹೆಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕು ಮಟ್ಟದ ಎರಡು ದಿನದ ಕ್ರೀಡಾ ಕೂಟಕ್ಕೆ ಶಾಸಕ ಅನಿಲ್ ಚಿಕ್ಕಮಾದು ಚಾಲನೆ ನೀಡಿದರು.
ಕ್ರೀಡಾಕೂಟ ಉದ್ಘಾಟಿಸಿ ಮಾತಾನಾಡಿದ ಅವರು ಓದಿನ ಜೊತೆಗೆ ಕ್ರೀಡೆಯನ್ನು ಬೆಳೆಸಿಕೊಳ್ಳಬೇಕು. ಕ್ರೀಡೆ ಬರಿ ಆಟವಾಗಿರದೇ ಬದುಕನ್ನು ಸೃಷ್ಟಿಸಿಕೊಡುತ್ತೆ ಕ್ರೀಡೆಯಿಂದ ಪೊಲೀಸ್, ಮಿಲಿಟರಿ ಮತ್ತಿತರ ಹುದ್ದೆಗಳನ್ನು ಗಿಟ್ಟಿಸಿಕೊಳ್ಳಬಹುದು. ನನ್ನ ಅಧಿಕಾರಾವಧಿಯಲ್ಲಿ ನಮ್ಮ ತಾಲ್ಲೂಕಿನಲ್ಲಿ ಐದು ಕೋಟಿ ಅನುದಾನದಲ್ಲಿ ಆಧುನಿಕ ವ್ಯವಸ್ಥೆಯುಳ್ಳ ಕ್ರೀಡಾಂಗಣ ನಿರ್ಮಿಸಿ ಇಲ್ಲಿಂದ ಪ್ರತಿಭೆಗಳು ರಾಷ್ಟ್ರಮಟ್ಟದ ಹೋಗಬೇಕು ಎನ್ನುವ ಮಹಾದಾಶೆ ನನ್ನದು ಎಂದರು.
ಇದೇ ವೇಳೆ ನಮ್ಮ ತಾಲ್ಲೂಕಿನಿಂದ ಒಲಿಂಪಿಕ್ ಹಂತಕ್ಕೆ ಹೋಗುವ ಮಕ್ಕಳಿಗೆ ನಾನು ಮತ್ತು ನನ್ನ ತಂದೆ ಚಿಕ್ಕಮಾದು ಮತ್ತು ರಾಜಕೀಯ ಗುರುಗಳಾದ ಆರ್ ಧೃವನಾರಾಯಣ್ ಹೆಸರಿನಲ್ಲಿ ಹತ್ತು ಲಕ್ಷ ಹಣವನ್ನ ವೈಯಕ್ತಿಕವಾಗಿ ನೀಡುತ್ತೇನೆ ಎಂದು ಘೋಷಣೆ ಮಾಡಿದರು.
ಈ ಕ್ರೀಡಾಕೂಟದಲ್ಲಿ ಸುಮಾರು ಹದಿನೈದಕ್ಕೂ ಹೆಚ್ಚು ಕಾಲೇಜು ಕ್ರೀಡಾಪಟುಗಳು ಶಿಕ್ಷಕರು, ವಿದ್ಯಾರ್ಥಿಗಳು, ಇಲಾಖಾ ಅಧಿಕಾರಿಗಳು, ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.

