ನಂಜನಗೂಡು: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಕೊರೊನಾ ಮತ್ತೆ ವಕ್ಕರಿಸಿದ್ದು, ಇದನ್ನು ತಡೆಯಲು ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನಲ್ಲಿ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ ಎಂದು ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶಿವಪ್ರಸಾದ್ ಹೇಳಿದ್ದಾರೆ.

ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಯಲ್ಲಿ 20 ಬೆಡ್‌ ಸೇರಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈ ಗೊಂಡು, ಕೋವಿಡ್‌ ವಿರುದ್ಧ ಹೋರಾಡಲು ಸರ್ವಸನ್ನದ್ದರಾಗಿ ನಿಂತಿದ್ದೇವೆ. ನಂಜನಗೂಡು ತಾಲೂಕಿನಲ್ಲಿ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಸದ್ಯಕ್ಕೆ ಈ ರೀತಿ ಲಕ್ಷಣ ಮತ್ತು ಸೋಂಕುಗಳು ಪತ್ತೆಯಾಗಿಲ್ಲ.

ಆದರೂ ಮುಂಜಾಗ್ರತಾ ಕ್ರಮವಾಗಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬೆಡ್‌, ಆಕ್ಸಿಜನ್‌, ಸ್ಲಾಬ್‌ ಟೆಸ್ಟಿಂಗ್‌ ಸೇರಿ ಕೆಲವು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಕೊರೊನಾ ರೀತಿ ಯಾವುದೇ ಲಕ್ಷಣಗಳು, ಈವರೆಗೂ ಇಲ್ಲಿ ಯಾವ ಕೇಸ್‌ ಕೂಡ ಬಂದಿಲ್ಲ. ಜನರು ಭಯ ಮತ್ತು ಆತಂಕಕ್ಕೆ ಒಳಗಾಗೋದು ಬೇಡ. ಆ ರೀತಿಯ ಲಕ್ಷಣಗಳು ಬಂದರೇ ಪರೀಕ್ಷೆ ಮಾಡಿಸಿಕೊಳ್ಳುವಂತೆ ತಿಳಿಸಿದರು.