ನಂಜನಗೂಡು: ತಾಲ್ಲೂಕಿನ ದೇವನೂರು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಶಿಕ್ಷಣ ಇಲಾಖೆಯಿಂದ ನಡೆದ ದೊಡ್ಡಕವಲಂದೆ ಹೋಬಳಿ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ನಂಜನಗೂಡು ತಾಲ್ಲೂಕಿನ ದೊಡ್ಡ ಕವಲಂದೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ಹಲವು ಪ್ರಥಮ ಮತ್ತು ದ್ವಿತೀಯ ಸ್ಥಾನಗಳನ್ನು ಗಳಿಸಿ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ನಂಜನಗೂಡು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ಶಿಕ್ಷಕರು ವ್ಯಕ್ತಪಡಿಸಿದ್ದಾರೆ.
ಥ್ರೋ ಬಾಲ್ ನಲ್ಲಿ ಬಾಲಕರು ಪ್ರಥಮ ಸ್ಥಾನವನ್ನು ಪಡೆದುಕೊಂಡರೆ, ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಬಾಲಕಿಯರು ಪ್ರಥಮ ಸ್ಥಾನವನ್ನು ಪಡೆದುಕೊಂಡು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅಥ್ಲೆಟಿಕ್ಸ್ : 100 ಮೀ, ಲಾಂಗ್ ಜಂಪ್, ರಿಲೇಯಲ್ಲಿ ವಿದ್ಯಾರ್ಥಿನಿ ಬಿಂದುಶ್ರೀ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾಳೆ. 1500 ಮೀ. ಓಟದಲ್ಲಿ ಪ್ರಥಮ, 200 ಮೀ. ಓಟದಲ್ಲಿ ದ್ವಿತೀಯ, ರಿಲೇಯಲ್ಲಿ ಸೈಯಾದ್ ಸಾಲಿಯಾ ಪ್ರಥಮ ಸ್ಥಾನವನ್ನು ಪಡೆದುಕೊಂಡರು. ಹೈಜಂಪ್ ದ್ವಿತೀಯ, 800 ಮೀ. ಓಟದಲ್ಲಿ ಪ್ರಥಮ,
ರಿಲೇಯಲ್ಲಿ ಭವ್ಯನಾಯಕ ಪ್ರಥಮ ಸ್ಥಾನ. ವಿದ್ಯಾರ್ಥಿನಿ ಗಗನ 3000 ಮೀ ದ್ವಿತೀಯ, ರಿಲೇಯಲ್ಲಿ ಪ್ರಥಮ ಸ್ಥಾನ. ತಟ್ಟೆ ಎಸೆತ ಮತ್ತು ತ್ರಿವಿಧ ಜಿಗಿತದಲ್ಲಿ ದೇವಕಿ ತೃತೀಯ ಸ್ಥಾನ. 400 ಮೀ. ರಿಲೇಯಲ್ಲಿ ವಿದ್ಯಾರ್ಥಿನಿ ಮೌನ ಪ್ರಥಮ, 100 ಮೀ ರಿಲೇಯಲ್ಲಿ ದೀಕ್ಷಿತಾ ಮೊದಲನೇ ಸ್ಥಾನವನ್ನು ಪಡೆದು ಬಾಲಕಿಯರು ಉತ್ತಮ ಸಾಧನೆ ಮಾಡಿದ್ದಾರೆ.
ಬಾಲಕರ ವಿಭಾಗದಲ್ಲಿ 100 ಮೀ. ರಿಲೇಯಲ್ಲಿ ದ್ವಿತೀಯ, 800 ಮೀ. ಓಟ, 1500 ಮೀ ಓಟದಲ್ಲಿ ಪ್ರಥಮ ಸ್ಥಾನವನ್ನು ಮುಬಾರಕ್ ಅಹಮದ್ ಪಡೆದುಕೊಂಡಿದ್ದಾನೆ. ರಿಲೇಯಲ್ಲಿ ದ್ವಿತೀಯ, 100 ಮೀ. ಓಟದಲ್ಲಿ ವಿದ್ಯಾರ್ಥಿ ಅಜಯ್ ಪ್ರಥಮ ಸ್ಥಾನ. 400 ಮೀ. ಓಟದಲ್ಲಿ ದ್ವಿತೀಯ, ಲಾಂಗ್ ಜಂಪ್ ನಲ್ಲಿ ದ್ವಿತೀಯ, ರಿಲೇಯಲ್ಲಿ ದ್ವಿತೀಯ ಸ್ಥಾನವನ್ನು ಭರತ್ ಪಡೆದುಕೊಂಡರೆ, ಮಹಮ್ಮದ್ ಮಾಜ್ ವಿದ್ಯಾರ್ಥಿ ತಟ್ಟೆ ಎಸೆತದಲ್ಲಿ ದ್ವಿತೀಯ ಸ್ಥಾನ ರಿಲೇಯಲ್ಲಿ ದ್ವಿತೀಯ ಸ್ಥಾನ. ಶರಣ್ ಎಂಬ ವಿದ್ಯಾರ್ಥಿ ಜಾವೆಲಿನ್ ನಲ್ಲಿ ತೃತೀಯ ಸ್ಥಾನ ಪಡೆದುಕೊಂಡು ಉತ್ತಮ ಸಾಧನೆ ಮಾಡಿದ್ದಾರೆ.
ದೈಹಿಕ ಶಿಕ್ಷಣ ಶಿಕ್ಷಕಿ ಅರ್ಚನಾ ರವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಸಾಧನೆ ಮಾಡುತ್ತಾ ಬಂದಿದ್ದು, ಈ ಬಾರಿಯೂ ದೊಡ್ಡಕವಲಂದೆ ಸರ್ಕಾರಿ ಪ್ರೌಢ ಶಾಲೆಗೆ ಸಮಗ್ರ ಪ್ರಶಸ್ತಿಗಳು ಲಭಿಸಲು ಕಾರಣರಾಗಿದ್ದಾರೆ.
ಈ ಸಂದರ್ಭದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲರಾದ ಹಸೀನ್ ತಾಜ್, ದೈಹಿಕ ಶಿಕ್ಷಣ ಶಿಕ್ಷಕಿ ಅರ್ಚನಾ, ಶಿಕ್ಷಕರಾದ ಮಧುಶ್ರೀ, ವಾಸವಾಂಬ, ರಘು, ಶಶಿಭೂಷಣ್, ಮಹೇಶ್ವರಿ, ಬಾಲಸುಬ್ರಹ್ಮಣ್ಯಂ ಸೇರಿದಂತೆ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ವಿದ್ಯಾರ್ಥಿಗಳಿಗೆ ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

