ಮೈಸೂರು: ಸಿಎಂ ತವರು ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಶಾಲೆ ಮಕ್ಕಳಿಗೆ ಜಗುಲಿಯಲ್ಲಿ ಪಾಠ ನಡೆಯುತ್ತಿದ್ದು, ಮೂಲಭೂತ ಸೌಕರ್ಯವಂತೂ ಮರೀಚೀಕೆಯಾಗಿರುವ ಘಟನೆ ನಂಜನಗೂಡು ತಾಲ್ಲೂಕಿನ ಹರಗನಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪರಿಸ್ಥಿತಿ ನಡೆದಿದೆ.

ಹರಗನಪುರ ಮತ್ತು ಹೆಳವರಹುಂಡಿ ಎರಡು ಗ್ರಾಮಕ್ಕೆ ಇರುವೊದೊಂದೆ ಪ್ರಾಥಮಿಕ ಶಾಲೆ. ಒಂದರಿಂದ 5ನೇ ತರಗತಿವರೆಗೆ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 5 ತರಗತಿಗಳಿಗೆ ಇರುವುದೊಂದೆ ಕೊಠಡಿಯಾಗಿದೆ.

ಹೆಚ್ವುವರಿ ಕೊಠಡಿ ನಿರ್ಮಾಣ ಮಾಡುವಂತೆ ಹಲವು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನ ಇಲ್ಲ. ಕೊಠಡಿ ಕೊರತೆ ಹಾಗೂ ಮೂಲಭೂತ ಸೌಕರ್ಯವಿಲ್ಲದೆ ಖಾಸಗಿ ಶಾಲೆಗಳತ್ತ ಮಕ್ಕಳು ಹೊಡಟಿದ್ದಾರೆ. ಶಾಲೆಯಲ್ಲಿನ ಅವ್ಯವಸ್ಥೆ ಯಿಂದ ವರ್ಷದಿಂದ ವರ್ಷಕ್ಕೆ ದಾಖಲಾತಿ ಕುಂಟಿತವಾಗುತ್ತಿದೆ.

ಹೆಚ್ಚುವರಿ ಕೊಠಡಿ ಮೂಲಭೂತ ಸೌಕರ್ಯ ಕೊಡದಿದ್ರೆ ಈ ಶಾಲೆಗೆ ಬೀಗ ಗ್ಯಾರೆಂಟಿ. ಇನ್ನಾದ್ರು ಎಚ್ಚೆತ್ತು ಶಾಲೆ ಅಭಿವೃದ್ಧಿಗೆ ಶಿಕ್ಷಣ ಇಲಾಖೆ ಮುಂದಾಗಲಿ.