ಮೈಸೂರು : ಲೆಕ್ಚರರ್ ಜೊತೆ ಸ್ಟೂಡೆಂಟ್ ಎಸ್ಕೇಪ್ ಆದ ಘಟನೆ ನಡೆದಿದೆ. ಪ್ರೇಮ ಪಾಠ ಮಾಡಿ ವಿದ್ಯಾರ್ಥಿನಿ ಜೊತೆ ಪ್ರಾಧ್ಯಾಪಕ ಪರಾರಿಯಾಗಿದ್ದಾರೆ. ವಿದ್ಯಾರ್ಥಿನಿ ನಡೆಯಿಂದ ತಂದೆ ಹಾಸಿಗೆ ಹಿಡಿದಿದ್ದಾರೆ. ಶಿಕ್ಷಕಿಯಾಗಲು ಬಿಎಡ್ ಕಾಲೇಜ್ಗೆ ಸೇರಿದ್ದ ಯುವತಿ. ಮನೆಯವರ ವಿರೋಧ ಲೆಕ್ಕಿಸದೆ ತನಗಿಂತ 15 ವರ್ಷ ಹಿರಿಯನಾದ ಲೆಕ್ಚರ್ ಜೊತೆ ಮದುವೆಯಾಗಿದ್ದಾಳೆ.
ಹುಣಸೂರಿನ ನಿವಾಸಿ ಪೂರ್ಣಿಮ(24) ಲೆಕ್ಚರ್ ಜೊತೆ ಪ್ರೇಮವಿವಾಹ. ಎಂಎ ಮುಗಿಸಿ ಬಿಎಡ್ ಗಾಗಿ ಹುಣಸೂರಿನ ಮಹಾವೀರ್ ಕಾಲೇಜ್ ಆಫ್ ಎಜುಕೇಷನ್ ಗೆ ಪೂರ್ಣಿಮಾ ಸೇರಿದ್ದು, ಪಾಠ ಕಲಿಯುವ ಜೊತೆಗೆ ಲೆಕ್ಚರರ್ ಯಶೋದಕುಮಾರ್(39) ಜೊತೆ ಲವ್ವಿಡವ್ವಿ ನಡೆಸಿದ್ದಾಳೆ. ಮಗಳ ಪ್ರೇಮದ ವಿಚಾರ ಮನೆಯವರಿಗೆ ತಿಳಿದು ಮಗಳನ್ನ ಮನೆಯಲ್ಲೇ ಪೋಷಕರು. ಇರಿಸಿದ್ದರು.

ಇಬ್ಬರು ಪ್ರೇಮಿಗಳು ಮದುವೆ ಆಗಲು ತೀರ್ಮಾನಿಸಿದ್ದಾರೆ. ಪೂರ್ಣಿಮ ಮನೆಯಲ್ಲಿ ವಿರೋಧ ವ್ಯಕ್ತವಾಗಿದೆ. ಕಾಲೇಜಿಗೆ ಹೋಗದಂತೆ ತಡೆ ಒಡ್ಡಿದ್ದಾರೆ. ಆದ್ರೆ ಮೊಬೈಲ್ ನಲ್ಲೇ ಇವರ ಪ್ರೇಮಕತೆ ಮುಂದುವರೆದಿದೆ. ಡಿ.26 ರಂದು ಸರ್ಟಿಫಿಕೇಟ್ ತರುವುದಾಗಿ ತಿಳಿಸಿ ಮನೆ ಬಿಟ್ಟ ಪೂರ್ಣಿಮ ಹಿಂದಿರುಗಿಲ್ಲ.
ಮೊಬೈಲ್ ನಲ್ಲಿ ಮದುವೆ ಆಗಿರುವುದಾಗಿ ಮೆಸೇಜ್ ಹಾಕಿದ್ದಾಳೆ. ನಮ್ಮಿಬ್ಬರಿಗೂ ತೊಂದರೆ ನೀಡಬಾರದೆಂಬ ಉದ್ದೇಶದಿಂದ ರಕ್ಷಣೆಗಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ತಿಳಿಸಿದ್ದಾಳೆ. ಮಕ್ಕಳಿಗೆ ಪಾಠ ಹೇಳಿಕೊಟ್ಟು ಬುದ್ದಿ ಕಲಿಸಬೇಕಿದ್ದ ಪ್ರಾಧ್ಯಾಪಕನೆ ಸ್ಟೂಡೆಂಟ್ ಜೊತೆ ಪರಾರಿಯಾಗಿದ್ದಾರೆ.
ಬೀದಿಬದಿ ಸೊಪ್ಪುಮಾರಿ ಪೂರ್ಣಿಮಾ ಪೋಷಕರು ಜೀವನ ನಡೆಸುತ್ತಿದ್ದರು. ಮಗಳ ಓದಿಗೆ 2 ಲಕ್ಷ ಸಾಲ ಮಾಡಿ ಕಾಲೇಜ್ ಗೆ ಸೇರಿಸಿದ್ದರು. ಮಗಳು ಮಾಡಿದ ಕೆಲಸಕ್ಕೆ ಹೆತ್ತವರಿಗೆ ಶಾಕ್ ಆಗಿದ್ದು, ಪಾಠ ಹೇಳಿಕೊಡಬೇಕಾದ ಗುರುವಿನ ಕೆಲಸ ಇದೇನಾ ಎಂದು ಹಿಡಿ ಶಾಪ ಹಾಕಿದ ಪೋರ್ಣಿಮಾ ತಾಯಿ ಮಹದೇವಮ್ಮ.

