ಮೈಸೂರು: ದ್ವಿತೀಯ ಪಿಯು ವಿಧ್ಯಾರ್ಥಿ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನ ಮರಿಮಲ್ಲಪ್ಪ ಕಾಲೇಜಿನ ಕ್ಯಾಂಪಸ್ ನಲ್ಲಿ ನಡೆದಿದೆ.

ಮಾದೇಶ್ (17) ಮೃತ ವಿದ್ಯಾರ್ಥಿ. ಕಾಲೇಜು ಕ್ಯಾಂಪಸ್ ನಲ್ಲಿ ಕುಸಿದು ಬಿದ್ದಿದ್ದಾನೆ.ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಮಾದೇಶ್ ಮೃತ ಪಟ್ಟಿದ್ದಾನೆ.

ಚಿಕ್ಕ ವಯಸ್ಸಿನಿಂದ ಹಾರ್ಟ್ ಸಮಸ್ಯೆ ಇತ್ತೆಂದು ಹೇಳಲಾಗಿದೆ. ಎರಡು ವರ್ಷದಿಂದ ಮೈಸೂರಿನ ಹೆಬ್ಬಾಳಿನಲ್ಲಿ ಪಿಜಿಯಲ್ಲಿ ಅಕ್ಕನ ಜೊತೆ ಇದ್ದ ಮಾದೇಶ್ ಇದ್ದನು.