ಮೈಸೂರು: ಕಾಂಗ್ರೆಸ್ ಕಾರ್ಯಕರ್ತರಿಂದ  “ಸ್ಟಾಪ್ ವೋಟ್ ಚೂರಿ” ಅಭಿಯಾನ ಮೈಸೂರಿನ ಸಬರ್ಬನ್ ಬಸ್ ನಿಲ್ದಾಣದಲ್ಲಿ ನಡೆಯಿತು. ಬಿಜೆಪಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು  ಕಿಡಿಕಾರಿದರು.

ಸರ್ಕಾರಿ ಬಸ್ಸುಗಳಿಗೆ ಸ್ಟಿಕ್ಕರ್ ಅಂಟಿಸಿ ಅಭಿಯಾನ ಮಾಡಿದರು. ಬಿಜೆಪಿ ವೋಟ್ ಚೂರಿ ಮಾಡುತ್ತಿದೆ ಎಂದು ಕಿಡಿಕಾರಿದರು. ಅಭಿಯಾನದಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ಸೇರಿ ಅನೇಕ ಮುಖಂಡರು ಭಾಗಿಯಾದರು.