ಮೈಸೂರು : ಸರಗೂರು ತಾಲ್ಲೂಕಿನಲ್ಲಿ ಹುಲಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಗಿ ಗ್ರಾಮಕ್ಕೆ ಶಾಸಕ ಅನಿಲ್ ಚಿಕ್ಕಮಾದು ಭೇಟಿ ಕೊಟ್ಟರು. ಕೂಡಿಗೆ ಗ್ರಾಮದ ಹೊರವಲಯದಲ್ಲಿ ರೈತನ ಮೇಲೆ ಹುಲಿ ದಾಳಿ ಮಾಡಿತ್ತು. ಅರಣ್ಯ ಇಲಾಖೆಯ ನಿರ್ಲಕ್ಷ್ಯ ತನವೇ ಇದಕ್ಕೆ ಕಾರಣ ಎಂದು ಶಾಸಕ ಅನಿಲ್ ಚಿಕ್ಕಮಾದು ಆಕ್ರೋಶ ವ್ಯಕ್ತ ಪಡಿಸಿದರು.
ಹುಲಿ ಸಂಚರಿಸುವ ಪ್ರದೇಶದಲ್ಲಿ ಸರಿಯಾದ ಕೂಂಬಿಂಗ್ ನಡೆಸಿಲ್ಲ. ಅಧಿಕಾರಿಗಳಲ್ಲಿ ಹೊಂದಾಣಿಕೆ ಇಲ್ಲ. ಇವರಿಷ್ಠ ಬಂದಂತೆ ನಡೆದುಕೊಳ್ಳುತ್ತಿದ್ದಾರೆ. ಇದರಿಂದ ಎಷ್ಟೆಲ್ಲಾ ಸಮಸ್ಯೆ ಆಗಿದೆ. ಅರಣ್ಯಾಧಿಕಾರಿಗಳನ್ನಅನಿಲ್ ಚಿಕ್ಕಮಾದು ತರಾಟೆಗೆ ತೆಗೆದುಕೊಂಡರು.
ಘಟನೆ ಆದರೂ ಸ್ಥಳಕ್ಕೆ ಅಧಿಕಾರಿಗಳು ಬಂದಿಲ್ಲ ಎಂದು ಗ್ರಾಮಸ್ಥರು ದೂರಿದರು. ನಾನು ನಿಮ್ಮ ಗ್ರಾಮದಲ್ಲೇ ಇರ್ತೀನಿ ಮೊದಲು ಹುಲಿ ಸೆರೆ ಹಿಡಿಯೋಣ ಎಂದು ಶಾಸಕ ಹೇಳಿದರು. RFO ಎಲ್ಲಾ ಅಧಿಕಾರಿಗಳು ಕ್ವಾಟರ್ಸ್ ನಲ್ಲಿ ಆರಾಮಾಗಿ ಇರ್ತೀರಾ ಅರಣ್ಯ ಗಸ್ತು ಮಾಡ್ತಿಲ್ಲ ಎಂದು ಅರಣ್ಯ ಅಧಿಕಾರಿಗಳನ್ನ ಶಾಸಕ ಅನಿಲ್ ಚಿಕ್ಕಮಾದು ತರಾಟೆಗೆ ತೆಗೆದುಕೊಂಡರು. ಅರಣ್ಯ ಇಲಾಖೆ ಸರಿಯಾಗಿ ಕೆಲಸ ಮಾಡಿದ್ರೆ ಇಂತಹ ಘಟನೆ ನಡೆಯುವುದಿಲ್ಲ ಎಂದು ಅಧಿಕಾರಿಗಳಿಗೆ ಶಾಸಕ ಅನಿಲ್ ಚಿಕ್ಕಮಾದು ಸೂಚನೆ ಕೊಟ್ಟರು.
ಹುಲಿ ದಾಳಿಯಿಂದ ರೈತ ದೊಡ್ಡ ನಿಂಗಯ್ಯ ಮೃತಪಟ್ಟಿದ್ದರು. ನೊಂದ ರೈತ ಕುಟುಂಬಕ್ಕೆ ಶಾಸಕ ಅನಿಲ್ ಚಿಕ್ಕಮಾದು ಸಾಂತ್ವನ ಹೇಳಿ ಧೈರ್ಯ ತುಂಬಿದರು. ಸದ್ಯ ಗ್ರಾಮದ ಸುತ್ತಮುತ್ತ ಆತಂಕ ಮನೆ ಮಾಡಿದೆ. ಶಾಸಕರ ಬಳಿ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡರು.

