ಮೈಸೂರು: ಇತಿಹಾಸ ಪ್ರಸಿದ್ದ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ಸೋಮನಾಥಪುರ ಜಾತ್ರಾ ಮಹೋತ್ಸವದ ಜಯಲಕ್ಷ್ಮಿ ಅಮ್ಮನವರ ಉತ್ಸವ ಅದ್ದೂರಿಯಾಗಿ ನೆರವೇರಿತು ವಾಡಿಕೆಯಂತೆ ಕಾವೇರಿ ನದಿ ತಟದಲ್ಲಿ ಸಿಂಗಾರಗೊಂಡು ಗ್ರಾಮದ ರಾಜ ಬೀದಿಗಳಲ್ಲಿ ಬಾಯಿ ಬೀಗ ಅರಕೆ ಹೊತ್ತ ನೂರಾರು ಭಕ್ತರು ದೇವಿ ದರ್ಶನಕ್ಕೆ ದೂರದ ಊರುಗಳಿಂದ ಬಂದು ನೆರೆದಿದ್ದ ಸಹಸ್ರಾರು ಭಕ್ತರ ಕ್ಷಮಕ್ಷಮದಲ್ಲಿ ಸದ್ದೂರಿಯಾಗಿ ನೆರವೇರಿತು.

ಸೋಮವಾರ ಸಂಜೆ ವೇಳೆಗೆ ಪಕ್ಕದ ಗ್ರಾಮಗಳಾದ ಕಗ್ಗಲೀಪುರ ಹಾಗೂ ಕುಳ್ಳನಕೊಪ್ಪಲು ಗ್ರಾಮದವರಿಂದ‌ ಮೈ ನವಿರೇಳಿಸೋ ಬಂಡಿ ಉತ್ಸವ ನೆರವೇರಿತು. ಇಂದು ಸಂಜೆ ಸುಮಾರು 6:30 ರ ವೇಳೆಗೆ ಗಜಲಕ್ಷ್ಮೀ ಹಾಗೂ ಜಯಲಕ್ಷ್ಮಿ ಅಮ್ಮನವರ ಕೊಂಡೋತ್ಸವ ನೆರವೇರಲಿದ್ದು ಇದಕ್ಕೆ ಸುತ್ತಮುತ್ತಲಿನ ಏಳೂರಿನ ಗ್ರಾಮಸ್ಥರೊಡನೆ ಜಿಲ್ಲೆಯ ನಾನಾ ಭಾಗದಿಂದ ಬರುವ ಬರುವ ಸಾವಿರಾರು ಭಕ್ತರು ಸಾಕ್ಷಿಯಾಗಲಿದ್ದಾರೆ.