ಮೈಸೂರು : ಕಾವೇರಿ ನದಿಯಲ್ಲಿ ಈಜಲು ಹೋಗಿ ಆರು ಜನ ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಗಂಭೀರ ವಾಗಿರುವ ಘಟನೆ ಕೆ ಆರ್ ನಗರ ಪಟ್ಟಣದ ಸಮೀಪದ ಹಳೆ ಎಡತೊರೆ ಅರ್ಕೇಶ್ವರ ಸ್ವಾಮಿ ಸಮೀಪದ ಕಾವೇರಿ ನದಿಯಲ್ಲಿ ನಡೆದಿದೆ.

ಕೃಷ್ಣರಾಜನಗರ ಸಮೀಪದ ಹಜರತ್ ಖಾದರ್ ಲಿಂಗವಲ್ಲಿ ಉರುಸ್ ವೀಕ್ಷಿಸಲು ಜನ ಬಂದಿದ್ದರು. ಕಾವೇರಿ ನದಿಯಲ್ಲಿ ಈಜಲು ಹೋದ ಎಂಟು ಜನರಲ್ಲಿ ಆರು ಜನ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಐಮನ್ ಬೆಂಗಳೂರು (13), ಅಫೀಫ ಕೆ ಆರ್ ನಗರ (13), ಯಾಸಿನ್ (23) ಬೆಂಗಳೂರು, ನೇಹಾ ಬೆಂಗಳೂರು (22), ಫಾತಿಮಾ (30) ಊಟಿ, ಉಮೆರ್ (5) ಮೈಸೂರು ಎಂದು ತಿಳಿದುಬಂದಿದೆ. ಇನ್ನಿಬ್ಬರನ್ನ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿದೆ.

View this post on Instagram

A post shared by News Karnataka (@newskarnataka)