ಮೈಸೂರು: ಕಚೇರಿ ಸಮಯದಲ್ಲಿ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿ ಜಮೀನಿನಲ್ಲಿ ಕುಳಿತು ಎಣ್ಣೆ ಹೊಡೆಯುವ ಸಮಾಜ‌ ಕಲ್ಯಾಣ ಇಲಾಖೆ ಅಧಿಕಾರಿಯೊಬ್ಬರು ಸ್ಥಳೀಯರ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಹೆಚ್.ಡಿ.ಕೋಟೆ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ರಾಮಸ್ವಾಮಿ ಸಿಕ್ಕಿಬಿದ್ದವರು.

ಎಂದಿನಂತೆ ಕರ್ತವ್ಯಕ್ಕೆ ಹಾಜರಾಗುವ ರಾಮಸ್ವಾಮಿ ಅಟೆಂಡೆನ್ಸ್ ಗೆ ಸಹಿ ಹಾಕುತ್ತಾರೆ. ಸ್ಥಳ ಪರಿಶೀಲನೆ ನೆಪಹೊಡ್ಡಿ ಎಸ್ಕೇಪ್ ಆಗುವ ರಾಮಸ್ವಾಮಿ ಯಾವುದಾದರೂ ಜಮೀನಿಗೆ ತೆರಳಿ ಏಕಾಂಗಿಯಾಗಿ ಎಣ್ಣೆ ಹೊಡೆಯುತ್ತಾ ಕುಳಿತು ಕರ್ತವ್ಯಕ್ಕೆ ದ್ರೋಹ ಬಗೆಯುತ್ತಿದ್ದಾರೆ. ಈ ಬಗ್ಗೆ ಯಾರೇ ಪ್ರಶ್ನಿಸಿದರೂ ಉಡಾಫೆ ಉತ್ತರ ನೀಡುತ್ತಾರೆಂದು ಆರೋಪವಿದೆ. ಹಾಜರಾತಿಗಾಗಿ ಕಚೇರಿಗೆ ಬರುವ ಇವರು ಕರ್ತವ್ಯ ನಿರ್ವಹಿಸದೇ ಸರ್ಕಾರಕ್ಕೆ ದ್ರೋಹ ಬಗೆಯುತ್ತಿದ್ದಾರೆ.

ಎರಡು ದಿನಗಳ ಹಿಂದೆ ತಾಲೋಕಿನ ಚಿಕ್ಕದೇವಮ್ಮನ ಬೆಟ್ಟದ ತಪ್ಪಲಿನ ಜಮೀನೊಂದರಲ್ಲಿ ಸರ್ಕಾರಿ ಕಚೇರಿ ಪುಸ್ತಕ ಮರದ ಬುಡದಲ್ಲಿರಿಸಿ ಮದ್ಯ ಸೇವನೆಯಲ್ಲಿ ತಲ್ಲೀನರಾದ ರಾಮಸ್ವಾಮಿ ಪರಿಸ್ಥಿತಿಯನ್ನ ಸ್ಥಳೀಯರು ಮೊಬೈಲ್ ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿದು ಬಿಟ್ಟಿದ್ದಾರೆ. ಈ ಕುರಿತಂತೆ ಪ್ರಶ್ನಿಸುವ ಮಂದಿಗೆ ಕುಡಿದ ಅಮಲಿನಲ್ಲಿ ಅಬಾಚ್ಯ ಪದಗಳಿಂದ ನಿಂದಿಸುತ್ತಾರೆ.

ಹಿಂದುಳಿದ ಎಚ್.ಡಿ.ಕೋಟೆ ತಾಲೋಕಿನಲ್ಲಿ ಜನರ ಸೇವೆಗೆ ನಿಯೋಜ‌ನೆಗೊಂಡ ಅಧಿಕಾರಿಗೆ ಜನರ ಕಷ್ಟಗಳಿಗಿಂತ ಎಣ್ಣೆ ಬಾಡೂಟವೇ ಇವರಿಗೆ ಪ್ರಪಂಚವಾಗಿದೆ. ಅಧಿಕಾರಿಯ ಮೋಜುಮಸ್ತಿ ಬಗ್ಗೆ ಸಾರ್ವಜನಿಕರು ಆಕ್ರೋಷ ವ್ಯಕ್ತಪಡಿಸಿದ್ದಾರೆ ನಡೆ ವಿರುದ್ದ ತಾಲೂಕಿನ ಜನರು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ. ಸಮಾಜ ಕಲ್ಯಾಣ ಸಚಿವರೂ ಜಿಲ್ಲಾ ಉಸ್ತುವಾರೂ ಆದ ಡಾ.ಹೆಚ್.ಸಿ.ಮಹದೇವಪ್ಪ ರವರಾದರೂ ಈತನ ಬಗ್ಗೆ ಕ್ರಮ ಕೈಗೊಳ್ಳುವರೇ…?.