ಮೈಸೂರು : ದಕ್ಷಿಣಕಾಶಿ ನಂಜನಗೂಡಿನಲ್ಲಿ ಶ್ರೀ ಗೌತಮ ಪಂಚ ಮಹಾರಥೋತ್ಸವದ ಸಂಭ್ರಮ. ನಂಜನಗೂಡಿನ ಇತಿಹಾಸ ಪ್ರಸಿದ್ಧ ಶ್ರೀ ನಂಜುಂಡೇಶ್ವರಸ್ವಾಮಿಯ ದೊಡ್ಡ ಜಾತ್ರಾ ಮಹೋತ್ಸವ ಇಂದು ಬೆಳಿಗ್ಗೆ 5.15 ರಿಂದ 5.40 ರೊಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಶ್ರೀ ಗೌತಮ ಪಂಚ ಮಹಾ ರಥೋತ್ಸವಕ್ಕೆ ಶಾಸಕ ದರ್ಶನ್ ಧ್ರುವನಾರಾಯಣ್ ಚಾಲನೆ ನೀಡಿದರು. ದೇಗುಲದ ಅರ್ಚಕ ವೃಂದದಿಂದ ಧಾರ್ಮಿಕ ವಿಧಿ ವಿಧಾನ ನಡೆಯಿತು. ಆರಂಭದಲ್ಲಿ ಗಣಪತಿ ರಥಕ್ಕೆ ಮಹಾಮಂಗಳಾರತಿ ನಡೆಯಿತು.
ಮಹಾಂಮಗಳಾರತಿ ಬಳಿಕ ರಥಗಳಿಗೆ ಚಾಲನೆ ನೀಡಲಾಯಿತು. ಮೊದಲಿಗೆ ಗಣಪತಿ ರಥೋತ್ಸವ ನಡೆಯಿತು. ನಂತರ ಶ್ರೀ ನಂಜುಂಡೇಶ್ವರ ಸ್ವಾಮಿ ರಥೋತ್ಸವ, ಪಾರ್ವತಿ ಅಮ್ಮನವರ ರಥ, ಸುಬ್ರಹ್ಮಣ್ಯ ರಥ, ಕೊನೆಯದಾಗಿ ಚಂಡಿಕೇಶ್ವರ ರಥಗಳ ಮೆರವಣಿಗೆ ನಡೆಯಿತು.
ಏಕಕಾಲದಲ್ಲಿ 5 ರಥೋತ್ಸವ ಗಳು ನಡೆಯಿತು. ಲಕ್ಷಾಂತರ ಭಕ್ತರು ದೊಡ್ಡ ಜಾತ್ರೆಯಲ್ಲಿ ಭಾಗಿಯಾದರು. ದೊಡ್ಡ ರಥ ಎಳೆದು ಲಕ್ಷಾಂತರ ಭಕ್ತರು ಭಕ್ತಿ ಸಮರ್ಪಿಸಿದರು. ನಂಜನಗೂಡಿನ ರಥ ಬೀದಿಯಲ್ಲಿ ಶ್ರೀ ಗೌತಮ ಪಂಚ ಮಹಾ ರಥೋತ್ಸವ ಸಾಗಿತು. ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಯಿತು.

