ಮೈಸೂರು: ಮುಸ್ಲಿಂ ಸಮುದಾಯದ ಶಬ್ ಎ ಬರಾತ್ ಹಬ್ಬದ ಹಿನ್ನಲೆ ಮೈಸೂರು ನಗರ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.

ಸೂಕ್ಷ್ಮ ಪ್ರದೇಶದಲ್ಲಿ ಪಥ ಸಂಚಲನ ನಡೆಸಿ ಸಮಾಜ ಘಾತುಕ ಶಕ್ತಿಗಳಿಗೆ ವಾರ್ನಿಂಗ್ ನೀಡಿದ್ದಾರೆ. ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ನಿರ್ಭಯವಾಗಿ ಹಬ್ಬ ಆಚರಿಸುವಂತೆ ಸಂದೇಶ ಹೊರಡಿಸಿದ್ದಾರೆ.

ಉದಯಗಿರಿ, ಮಂಡಿ ಹಾಗೂ ಎನ್ ಆರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿಸಿಪಿ ಸುಂದರರಾಜ್ ನೇತೃತ್ವದಲ್ಲಿ ಪಥಸಂಚಲನ ನಡೆಸಿ ಅಭಯ ನೀಡಿದ್ದಾರೆ.

