ಮೈಸೂರು: ಹೆಚ್.ಡಿ ಕೋಟೆ ಪಟ್ಟಣದ ವಿಜಯ ಬ್ಯಾಂಕ್ ಮತ್ತು ಐಟಿಐ ಕಾಲೇಜು ಪಕ್ಕದಲ್ಲಿರುವ ಸರ್ಕಾರಿ ಸ್ವಾಮ್ಯದ ಎಮ್ ಎಸ್ ಐ ಎಲ್ ವತಿಯಿಂದ ನಡೆಸಲಾಗುತ್ತಿರುವ ಮದ್ಯದಂಗಡಿಯಲ್ಲಿ ಮಧ್ಯರಾತ್ರಿ ಎರಡು ಕಡೆ ಏಕಕಾಲದಲ್ಲಿ ಸರಣಿ ಕಳ್ಳತನವಾಗಿದೆ.
ಏಕಕಾಲದಲ್ಲಿ ಎರಡು ತಂಡಗಳಾಗಿ ಬಂದ ಕಳ್ಳರು ಒಂದು ಅಂಗಡಿಯಲ್ಲಿ ಮುಖಕ್ಕೆ ಮಾಸ್ಕ್ ಧರಿಸಿ ಮತ್ತೊಂದು ಅಂಗಡಿಯಲ್ಲಿ ಬಟ್ಟೆಯಿಂದ ತಲೆತುಂಬ ಸುತ್ತಿಕೊಂಡು ಕೈಯಲ್ಲಿ ಕಬ್ಬಿಣದ ರಾಡ್ ಮತ್ತು ಕಟಿಂಗ್ ಪ್ಲೇರ್ ಹಿಡಿದು ಬಂದಿರುವ ಕಳ್ಳರು ಹೊಂಚುಹಾಕಿ ಅಂಗಡಿಯ ಹೊರಗಿನ ಸಿಸಿ ಕ್ಯಾಮರಾಗಳನ್ನು ಧ್ವಂಸ ಮಾಡಿದ್ದಾರೆ.
ಕಬ್ಬಿಣದ ರಾಡಿನಿಂದ ಅಂಗಡಿಯ ಸೆಲ್ಟರ್ ಅನ್ನು ಮುರಿದು ಒಳ ನುಗ್ಗಿದ ಕಳ್ಳರು ಕ್ಯಾಸ್ ಬಾಕ್ಸ್ ನಲ್ಲಿದ್ದ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಅಬಕಾರಿ ಇನ್ಸ್ಪೇಕ್ಟರ್ ಶಿವರಾಜ್, ಸಿಬ್ಬಂದಿಗಳಾದ ವೆಂಕಟೇಶ, ಶಿವಕುಮಾರ್, ಸದಾಶಿವ, ಚಿನ್ನಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

